ನಿಜಗಲ್ ಕೆರೆಯಲ್ಲಿ ಯವಕನೊಬ್ಬನ ಅನುಮಾನಾಸ್ಪದ ಸಾವು

#Swimming #Death # Nelamangala

20-09-2018

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ ಹಳೆ ನಿಜಗಲ್ ಕೆರೆಯಲ್ಲಿ ಮೋಜಿಗಾಗಿ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ಶಂಕಾಸ್ಪದ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತಪಟ್ಟ ಯುವಕನನ್ನು ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿಯ ಶ್ರೀನಿವಾಸ್‍ ಎಂದು ಗುರುತಿಸಲಾಗಿದೆ. ನಂದಿಹಳ್ಳಿ ಬಳಿಯ ರಿಲಯಾನ್ಸ್ ವೇರ್ ಔಸ್‍ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಗುರುವಾರ ಬೆಳಿಗ್ಗೆ ರಾಘವೇಂದ್ರ, ಮೋಹನ್ ಕುಮಾರ್, ವಿನಯ್ ಸಿಂಗ್, ಸಂತೋಷ್, ಸುರೇಶ್ ಬಾಬು ಮತ್ತು ತೇಜಸ್ ಸೇರಿ 6 ಮಂದಿಯ ಜೊತೆ ಈಜಲು ತೆರಳಿದ್ದಾರೆ.

ಈ ವೇಳೆ ಈಜಿ ಈಜಿ ಸುಸ್ತಾದ ಯುವಕ ನೋಡ ನೋಡುತ್ತಲೆ ಕಣ್ಮರೆಯಾಗಿದ್ದಾನೆ. ಶ್ರೀನಿವಾಸ್ ಕಣ್ಮೆರೆಯಾಗುವ ವಿಡಿಯೋ ಮತ್ತೊಬ್ಬ ಸ್ನೇಹಿತನ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈತನೊಂದಿಗೆ ಇತರ ಸ್ನೇಹಿತರು ಸಹ ಈಜುತ್ತಿದ್ದರು. ಆದರೆ ಯಾರು ಸಹ ಆತನನ್ನು ಉಳಿಸಲಾಗಲಿಲ್ಲ. ಶ್ರೀನಿವಾಸ್ ಮುಳುಗುತ್ತಿರುವಾಗ ದಡದಲ್ಲಿರುವ ಮತ್ತೊಬ್ಬ ಸ್ನೇಹಿತ, ಅವನು ಮುಳುಗುತ್ತಿದ್ದಾನೆ ಜುಟ್ಟು ಹಿಡಿದು ಮೇಲೆತ್ತಿ ಅನ್ನುತ್ತಾನೆ. ಆಗ ಮೇಲೆತ್ತಲಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸರೆಯಾಗಿದೆ.

ಶ್ರೀನಿವಾಸ್‍ಗೆ ನೀರು ಎಂದರೆ ಭಯ, ಆತನಿಗೆ ಈಜು ಬರುತ್ತಿರಲಿಲ್ಲ ಎಂದು ಮೃತಳ ಚಿಕ್ಕಮ್ಮ ಆರೋಪಿಸಿದ್ದಾರೆ. ಆದರೆ ಆತನಿಗೆ ನೀರಿಗೆ ಇಳಿಯಬೇಡ ಎಂದರೂ ಸ್ವತಃ ಅವನೇ ಈಜಲು ತೆರಳಿದ್ದ ಎಂದು ಸ್ನೇಹಿತ ಸಂತೋಷ್ ತಿಳಿಸಿದ್ದಾನೆ. ಆದ್ದರಿಂದ ಈ ಘಟನೆಯ ಸುತ್ತ ಹಲವಾರು ಹನುಮಾನಗಳು ಸೃಷ್ಟಿಯಾಗಿದೆ. ಸುದ್ದಿ ತಿಳಿದು ದಾಬಸ್‍ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿ ಮೃತ ಶ್ರೀನಿವಾಸ್ ದೇಹವನ್ನು ಕೆರೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿ 6 ಜನ ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Swiming death ದುರ್ಘಟನೆ ಮೃತದೇಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ