ಲಂಚ ಸ್ವೀಕಾರ: ಎಸಿಬಿ ಬಲೆಗೆ ಮಹಿಳಾ ಎಸ್.ಡಿ.ಎ

#Second division assistant #ACB #Bagalkote

20-09-2018

ಬಾಗಲಕೋಟೆ: ಲಂಚ ಪಡೆಯುತ್ತಿರುವಾಗ ದ್ವಿತೀಯ ದರ್ಜೆ ಸಹಾಯಕಿ ಒಬ್ಬರು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಎಂ.ವಿ ಮಲ್ಲಾಪುರ, ನೇತೃತ್ವದಲ್ಲಿ ನಡೆದ ದಾಳಿ ವೇಳೆ, ಬಾಗಲಕೋಟೆಯ ಕವಿತಾ ಬೇವಿನಗಿಡದ ಎಂಬ ದ್ವಿತೀಯ ದರ್ಜೆ ಸಹಾಯಕಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಚೇರಿ‌ಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಇವರು ಎನ್.ಓ.ಸಿ ಪತ್ರ ಕೊಡಲು 5 ಸಾವಿರ ಲಂಚ ಕೇಳಿದ್ದು, ಮಾಂತೇಶ್ ರಾಠೋಡ್ ಎಂಬುವರಿಂದ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ACB Second division assi ಭ್ರಷ್ಟಾಚಾರ ಎನ್.ಓ.ಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ