ತಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದ ಹೆಚ್.ಎಂ.ರೇವಣ್ಣ

#H.M.revanna #Minister post

20-09-2018

ರಾಮನಗರ: ‘ತಾನು ಕೂಡ ಕಾಂಗ್ರೆಸ್ ಪಕ್ಷದ ಒಬ್ಬ ಹಿರಿಯ ನಾಯಕ. ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೂ ದುಡಿದಿದ್ದೇನೆ, ಸಚಿವ ಸ್ಥಾನಕ್ಕಾಗಿ ನಾನೂ ಒಬ್ಬ ಆಕಾಂಕ್ಷಿ ಎಂದು ಎಂಎಲ್‌ಸಿ ಎಚ್.ಎಂ.ರೇವಣ್ಣ ಹೇಳಿದ್ದಾರೆ. ರಾಮನಗರದಲ್ಲಿಂದು ಮಾತನಾಡಿದ ಅವರು, ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಕೊಡುವುದು ಬಿಡುವುದು ನಮ್ಮ ನಾಯಕರಿಗೆ, ಕೇಂದ್ರದ ಮುಖಂಡರಿಗೆ ಬಿಟ್ಟಿದ್ದು ಎಂದಿದ್ದಾರೆ.

ಸಚಿವ ಸ್ಥಾನ ಆಕಾಂಕ್ಷಿಗಳಾದ ಕಾಂಗ್ರೆಸ್ ಶಾಸಕರ ಅಸಮಧಾನದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಹೆಚ್.ಎಂ.ರೇವಣ್ಣ, ಇದು ಇಂದಿನ ವಿಷಯವೇನಲ್ಲ, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ, ಆದರೆ ಇದೀಗ ಎಲ್ಲವೂ ಶಮನವಾಗಿದೆ ಎಂದರು. ಸಮ್ಮಿಶ್ರ ಸರ್ಕಾರ ಹೊಸ ಪ್ರಯೋಗ, ಸಣ್ಣಪುಟ್ಟ ಜಗಳವಿದ್ದರೆ ಅದು ನಮ್ಮ ಮನೆ ಜಗಳ, ನಾವೇ ಸರಿಪಡಿಸಿಕೊಳ್ಳುತ್ತೇವೆ. ಜಾರಕಿಹೊಳಿ ಬ್ರದರ್ಸ್ ಸಿದ್ದರಾಮಯ್ಯ ಅವರನ್ನ ಭೇಟಿಯಾದ ಬಳಿಕ ಸಮಸ್ಯೆ ಶಮನವಾಗಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ