ಸಿಎಂ ಕುಮಾರಸ್ವಾಮಿ ಕ್ಷೆಮೆಯಾಚಿಸಬೇಕು: ಶಾಸಕ ಸಿ.ಟಿ.ರವಿ

#C.T.Ravi  #Operation Kamala #H.D.Kumaraswamy

20-09-2018

ಚಿಕ್ಕಮಗಳೂರು: ‘ಸಿಎಂ ಕುಮಾರಸ್ವಾಮಿ ಹತಾಶರಾಗಿದ್ದಾರೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ‘ದಂಗೆಗೆ ಕರೆ ಕೊಡುವ ಹೇಳಿಕೆ ಸಂವಿಧಾನ ಬಾಹಿರ ಹಾಗೂ ಖಂಡನೀಯ, ಕೂಡಲೇ ಸಿಎಂ ಅವರು ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ. ಕುಮಾರಸ್ವಾಮಿ ನೈತಿಕ ದಾರಿಯಲ್ಲಿ ಮುಖ್ಯಮಂತ್ರಿ ಆಗಿಲ್ಲ, ಅಧಿಕಾರಕ್ಕಾಗಿ ಕಾಂಪ್ರಮೈಸ್ ಮಾಡಿಕೊಳ್ಳುವವರು ಇಷ್ಟೊಂದು ಪೌರುಷದ ಮಾತುಗಳನ್ನು ಆಡುವ ಅವಶ್ಯಕತೆ ಇಲ್ಲ. ಆಪರೇಷನ್, ಬಂಡಾಯ ನೀವು ಮಾಡದಿರುವ ಕೆಲಸವೇನಲ್ಲ. ನೀವು ಮಾಡಿದರೆ ಪ್ರಜಾಪ್ರಭುತ್ವ ಮಾರ್ಗ, ಬೇರೆಯವರು ಮಾಡಿದರೆ ಪ್ರಜಾಪ್ರಭುತ್ವ ವಿರೋಧಿ ಎನ್ನುವುದು ಸಿಎಂ ದ್ವಂದ್ವ ನಿಲುವನ್ನು ತೋರಿಸುತ್ತದೆ. ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಚಟುವಟಿಕೆ ಬಿಜೆಪಿ ನಡೆಸಿಲ್ಲ. ಆಂತರಿಕ ಕುಸಿತದಿಂದ ಸರ್ಕಾರ ಬಿದ್ರೆ ಉಳಿಸುವ ಜವಾಬ್ದಾರಿ ನಮ್ಮದಲ್ಲ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ