ಬಿಜೆಪಿ ವಿರುದ್ಧ ಗುಡುಗಿದ ಸಿಎಂ ಕುಮಾರಸ್ವಾಮಿ

#H.D.Kumaraswamy #Hassan #B.S.Yeddyurappa #BJP

20-09-2018

ಹಾಸನ: ಹಾಸನ ಗಡಿ ಭಾಗದಲ್ಲಿ ಸಿಎಂ ಕುಮಾರಸ್ವಾಮಿ ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. ‘ಸಮ್ಮಿಶ್ರ ಸರ್ಕಾರಕ್ಕೆ ಇದೇ ರೀತಿ‌ ತೊಂದರೆ ನೀಡುತ್ತಿದ್ದರೆ ತಾನು ಸುಮ್ಮನಿರಲ್ಲ, ನಾಡಿನ ಜನರಿಗೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ಕೊಡುತ್ತೇವೆ’ ಎಂದು ಆವೇಶದಿಂದ ಹೇಳಿದ್ದಾರೆ.

‘ಬಿಜೆಪಿಯವರು ಹುಡುಗಾಟ ಆಟೋದನ್ನು ನಿಲ್ಲಿಸಬೇಕು, ಅವರೊಬ್ಬರೇ ಅಧಿಕಾರದಲ್ಲಿ ಇರಬೇಕಾ? ಎಂದು ಕಿಡಿಕಾರಿದ್ದಾರೆ. ಯಡಿಯೂರಪ್ಪ ಅವರಿಗೆ ಎಲ್ಲೋ ಬುದ್ಧಿ ಭ್ರಮಣೆಯಾಗಿದೆ. ನಾನು ನಿತ್ಯ ಇವರ ಕಾಟ ಸಹಿಸಬೇಕೋ ಇಲ್ಲ ನಾಡಿನ‌ ಜನರ ಹಿತ ಕಾಯಬೇಕೋ ಎಂದು ಆಕ್ರೋಶಗೊಂಡರು.

‘ತಾನು ಕಿಂಗ್ ಪಿನ್ ಎಂದು ಯಾರ ಹೆಸರೂ ಹೇಳಿಲ್ಲ. ಕಳ್ಳ ಅಂದರೆ ಸೋಮಶೇಖರ್ ಏಕೆ ಹೆಗಲು‌ ಮುಟ್ಟಿನೊಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ. ಮುಂದಿನ‌ ದಿನಗಳಲ್ಲಿ ದಂಧೆಕೋರರ ಹೆಸರು ಬಯಲು ಮಾಡುವೆ' ಎಂದರು.

ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಯಡಿಯೂರಪ್ಪನವರ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಸರ್ಕಾರ ಕ್ರಿಯಾಶೀಲವಾಗಿಲ್ಲ ಅಂದರೆ ಯಾರೋ ಒಬ್ಬ ಶ್ರೀಲಂಕಾಕ್ಕೆ ಏಕೆ ಓಡಿ ಹೋಗಬೇಕಿತ್ತು ಎಂದು ಉದಯಗೌಡ ಹೆಸರು ಹೇಳದೆಯೇ ಸಿಎಂ ಅವರ ವಿರುದ್ಧ ಲೇವಡಿ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ