ಕುಮಾರಸ್ವಾಮಿಗೆ ಹಲವಾರು ಮುಖವಾಡ ಇದೆ: ಆಯನೂರು ಮಂಜುನಾಥ್

#Ayanur Manjunath #MLC #Kumaraswamy

20-09-2018

ಬೆಂಗಳೂರು: ‘ಒಂದು ವೇಳೆ ಯಾವುದಾದರೂ ಕಾರಣಕ್ಕೆ ಜನ ದಂಗೆ ಎದ್ದರೆ ಅದಕ್ಕೆ ಕುಮಾರಸ್ವಾಮಿ ಅವರೇ ಜವಾಬ್ದಾರಿ ಆಗಬೇಕಾಗುತ್ತದೆ ಎಂದು, ಎಂ.ಎಲ್.ಸಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ನಗರದ ಡಾಲರ್ಸ್ ಕಾಲೋನಿಯಲ್ಲಿ ಮಾತನಾಡಿದ ಎಂ.ಎಲ್.ಸಿ ಆಯನೂರು ಮಂಜುನಾಥ್, ‘ಕುಮಾರಸ್ವಾಮಿ ಎಂದೂ ಕೂಡ ಸಭ್ಯತೆಯಿಂದ ರಾಜಕಾರಣ ಮಾಡಿದವರಲ್ಲ. ಮಧ್ಯಂತರದಲ್ಲಿ ನಾಟಕ ಮಾಡಿದವರು, ಬೇರೆ ಬೇರೆ ಸಮಯದಲ್ಲಿ ಗೂಂಡಾಗಿರಿಯ ಮಾತುಗಳನ್ನು ಕೇಳಿದ್ದೇವೆ, ಕುಮಾರಸ್ವಾಮಿಗೆ ಹಲವಾರು ಮುಖವಾಡ ಇದೆ. ಇದು ಅವರ ನೈಜ ಬಣ್ಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಕಾರ್ಯವೈಖರಿಯಿಂದ ಬೇಸತ್ತ ಶಾಸಕರು ಅವರನ್ನು ಬಿಟ್ಟು ಹೊರಟಿದ್ದಾರೆಯೇ ಹೊರತು ಅದಕ್ಕೆ ಯಾವುದೇ ಆಪರೇಷನ್ ಅಥವಾ ಇಂಜೆಕ್ಷನ್ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಂತಹ ದಲಿತ ನಾಯಕರನ್ನು ಸಹಿಸಿಕೊಳ್ಳುವ ತಾಳ್ಮೆ ಕುಮಾರಸ್ವಾಮಿಗೆ ಇಲ್ಲ ಎಂದು ಟೀಕಿಸಿದ್ದಾರೆ.

ಅತೃಪ್ತ ಶಾಸಕರು ಮಹರಾಷ್ಟ್ರಕ್ಕೊ ಅಥವ ಮುಂಬೈಗೊ ಹೋದರೆ ನಾವು ಜವಬ್ದಾರಿ ಅಲ್ಲ, ಅವರು ಅಸಮಾಧಾನಗೊಂಡಿದ್ದಾರೆ, ಹಾಗಾಗಿ ಹೋಗ್ತಾ ಇರಬಹುದು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Ayanur Manjunath MLC ತಾಳ್ಮೆ ಇಂಜೆಕ್ಷನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ