ಮಾಜಿ ಸಚಿವರೊಬ್ಬರ ಪ್ರಚೋದನಕಾರಿ ಭಾಷಣ ವೈರಲ್!

#Dr. Sharan Prakash Patil #SP #Congress

20-09-2018

ಕಲಬುರಗಿ: ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಸೇಡಂ ತಾಲ್ಲೂಕಿನ ಆಡಕಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಾ.ಶರಣಪ್ರಕಾಶ ಪಾಟೀಲ ಅವರು, ‘ಬಿಜೆಪಿ ಕಾರ್ಯಕರ್ತರು ಹತ್ತು ಹೊಡೆದರೆ ನೀವು ಒಂದಾದರೂ ಹೊಡೆದು ಬನ್ನಿ ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ. ಹೇಡಿಗಳಂತೆ ಮನೆಯಲ್ಲಿ ಕೂರಬೇಡಿ. ಈ ಹಿಂದೆ ಸಚಿವ ಸ್ಥಾನದಲ್ಲಿ ಇದ್ದೇ, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಸುಮ್ಮಿನಿದ್ದೆ. ಈಗ ಬಿಜೆಪಿ ಕಾರ್ಯಕರ್ತರನ್ನು ಹೊಡೆದು ಬನ್ನಿ ನಾನಿದ್ದೇನೆ, ನೀವು ಹೊಡಿಸಿಕೊಂಡರೆ ಹೊಡಿತಾರೆ, ನೀವು ಹತ್ತಾರು ಮಂದಿಯನ್ನು ಕಟ್ಟಿಕೊಂಡು ಹೊಡೆಯಿರಿ’ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ತಮ್ಮ ಮಾತು ಮುಂದುವರೆಸಿದ ಶರಣಪ್ರಕಾಶ ಪಾಟೀಲ ಅವರು, 'ಈ ಹಿಂದೆ ವಿಧಾನಸಭೆ ಎಲೆಕ್ಷನ್ ಸಂದರ್ಭದಲ್ಲಿ ನನ್ನ ಕಾರಿಗೂ ಅಡ್ಡಗಟ್ಟಿದ್ದರು ಆದರೂ ನಾನು ಸುಮ್ಮನೆ ಕುಳಿತಿದ್ದೆ, ಯಾಕೆಂದರೆ ಆಗ ನಾವು ಅಧಿಕಾರದಲ್ಲಿದ್ದೆವು. ಇಲ್ಲದೇ ಹೋದ್ರೆ ಆಗಲೇ ನಾನು ಒದ್ದು ಒಳಗಡೆ ಹಾಕಿಸುತ್ತಿದ್ದೆ. ಈ ವೇಳೆ ಎಸ್ಪಿಗೆ ಕರೆ ಮಾಡಿ ಸ್ಥಳಕ್ಕೆ ಬರದೆ ಹೋದರೆ ಸಸ್ಪೆಂಡ್ ಮಾಡುತ್ತೀನಿ ಅಂತ ಅವಾಜ್ ಹಾಕಿದ್ದೆ’ ಆಗ ಎಸ್ಪಿ ಬಂದು ಎಲ್ಲಾ ಕಂಟ್ರೋಲ್ ಮಾಡಿದರು’ ಎಂದು ಎಸ್ಪಿ ವಿರುದ್ಧವೂ ಅವಹೇಳನವಾಗಿ-ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dr. Sharan prakash p viral ಸಸ್ಪೆಂಡ್ ಅವಾಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ