ಸಿಗರೇಟು ತರುವ ವಿಚಾರದಲ್ಲಿ ಯುವಕರ ನಡುವೆ ಹೊಡೆದಾಟ !

Kannada News

02-06-2017

ಬೆಂಗಳೂರು:- ಕೆಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಗುರುವಾರ  ರಾತ್ರಿ ಸಿಗರೇಟು ತರುವ ವಿಚಾರದಲ್ಲಿ ಯುವಕರ ನಡುವೆ ಹೊಡೆದಾಟ ನಡೆದು ಓರ್ವ ಗಾಯಗೊಂಡಿದ್ಧಾನೆ. ಗಾಯಗೊಂಡಿರುವ ಭುವನೇಶ್ವರಿನಗರದ ವರುಣ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಶರತ್ ಎಂಬಾತನನ್ನು ಬಂಧಿಸಿ ಉಳಿದವರಿಗಾಗಿ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭುವನೇಶ್ವರಿನಗರದ ಬಳಿ ರಾತ್ರಿ 9ರ ವೇಳೆ ಬಂದ ಐದಾರು ಮಂದಿ ಯುವಕರು ವರುಣ್‍ನನ್ನು ಸಿಗರೇಟು ಕೇಳಿದ್ದಾರೆ ನನ್ನ ಬಳಿ ಇಲ್ಲ ಎಂದಾಗ ಅಂಗಡಿಯಲ್ಲಿ ತಂದು ಕೊಡು ಎಂದು ಮಾಡಿದ ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಟ ಸಂಭವಿಸಿದೆ. ಹೊಡೆದಾಟದಲ್ಲಿ ವರಣ್ ಗಾಯಗೊಂಡಿದ್ದು ಸುದ್ದಿ ತಿಳಿದು ಪೊಲೀಸರು ಬರುವಷ್ಟರಲ್ಲಿ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ ಪ್ರಕರಣ ದಾಖಲಿಸಿದ ಕೆಪಿ ಅಗ್ರಹಾರ ಪೊಲೀಸರು ಶರತ್‍ನನ್ನು ಬಂಧಿಸಿ ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ