ಲೂಟಿ ಮಾಡಿದ್ದ ಹಣ ಕಟ್ಟಲು ಮುಂದಾದ ನಿವೃತ್ತ ಸಿಬ್ಬಂದಿ!

#Bus depot # Depot workers #Gangavathi

20-09-2018

ಕೊಪ್ಪಳ: ಜಿಲ್ಲೆಯ ಗಂಗಾವತಿ ಬಸ್ ಡಿಪೋದಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು, ಸರ್ಕಾರಕ್ಕೆ ಸರ್ಕಾರಿ ನೌಕರರೇ ಭಾರೀ ವಂಚನೆ ಎಸಗಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ನೀಡಬೇಕಿದ್ದ ಜನರ ದುಡ್ಡನ್ನೇ ಡಿಪೋ ಸಿಬ್ಬಂದಿ ಗುಳುಂ ಮಾಡಿದ್ದಾರೆ. ಈ ಕೃತ್ಯದಲ್ಲಿ ನಿವೃತ್ತ ನೌಕರರು ಸೇರಿದಂತೆ ಹಲವು ಸಿಬ್ಬಂದಿಗಳು ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಕಳೆದ 8 ವರ್ಷದಿಂದ ಸುಮಾರು 30ಲಕ್ಷಕ್ಕೂ ಅಧಿಕ ಹಣ ಭ್ರಷ್ಟಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ವಿಭಾಗೀಯ ವಿಜಿಲೆನ್ಸ್ ತಂಡ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ತಪ್ಪೊಪ್ಪಿಕೊಂಡು ಹಣ ಕಟ್ಟಲು ಮುಂದಾಗಿದ್ದಾರೆ ನಿವೃತ್ತ ಸಿಬ್ಬಂದಿ ರಾಘವೇಂದ್ರ ಎಂಬುವವರು. ಲೆಕ್ಕಪತ್ರ ವಿಭಾಗದ ಸಿಬ್ಬಂದಿ, ಡಿಪೋ ವ್ಯವಸ್ಥಾಪಕರು ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Bus depot Illegal ಸಿಬ್ಬಂದಿ ಭ್ರಷ್ಟಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ