ಯಡಿಯೂರಪ್ಪ ಪರ್ಸೆಂಟೇಜ್ ನ‌ ಪಿತಾಮಹ: ಸಿಎಂ

#D.K.Shivakumar #CM Kumaraswamy #Percentage

20-09-2018

ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂ ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರ ಸಲಹೆ ಮೇರೆಗೆ ಸಚಿವ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಕೆಶಿ ಭೇಟಿ ವೇಳೆ ಸಚಿವ ಬಂಡೆಪ್ಪ ಕಾಶೆಂಪುರ ಅವರು ಸಿಎಂ ಜೊತೆಗಿದ್ದರು.

ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ವಿವಿಧ ಜಿಲ್ಲೆಗಳ ಪ್ರವಾಸ ವೇಳೆ ಫುಡ್ ಪಾಯಿಸನ್ ಆಗಿ ಡಿಕೆಶಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ತಿಳಿಸಿದರು.

ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ‘ಬಿಜೆಪಿಯವರು ಪದಬಳಕೆ ವೇಳೆ ಹಿಡಿತ ಇರೋದು ಒಳ್ಳೆಯದು. ಅಪ್ಪ ಮಕ್ಕಳನ್ನ ಮುಗಿಸೋದೇ ರಾಜಕೀಯ ಎಂದು ಹೇಳಲಾಗುತ್ತಿದೆ. ಅಪ್ಪ ಮಕ್ಕಳು ಲೂಟಿ ಕೋರರು ಅಂತ ಹೇಳುತ್ತಿದ್ದಾರೆ, ಯಡಿಯೂರಪ್ಪನವರು ಹಿರಿಯರು, ಹೀಗಾಗಿ ಮಾತನಾಡುವಾಗ ಎಚ್ಚರ ವಹಿಸಬೇಕು' ಎಂದರು.

ಆಪರೇಷನ್ ಕಮಲ‌ ವಿಚಾರವಾಗಿ ಪ್ರತಿಕ್ರಿಯಿಸಿ, ‘ಯಡಿಯೂರಪ್ಪ ನಮ್ಮ ಸರ್ಕಾರ ಬೀಳಿಸಲು ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ನಾಗಮಂಗಲ ಶಾಸಕ ಸುರೇಶ್ ಗೌಡರಿಗೆ ಕರೆ ಮಾಡಿದ್ದಾರೆ ಬಿಜೆಪಿಯವರು. ಬಿಜೆಪಿಗೆ ಬಂದರೆ 5 ಕೋಟಿ ನೀಡುವುದಾಗಿ ಆಫರ್ ಮಾಡಿದ್ದಾರೆ ಎಂದು ತಿಳಿಸಿದರು. ಸಧ್ಯಕ್ಕೆ ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ನಲ್ಲಿ ಬಿಜೆಪಿ‌ ಚರ್ಚೆ ನಡೀತಿದೆ, ಅಪರೇಷನ್ ಕಮಲದ ಬಗ್ಗೆ  ಅಲ್ಲಿ‌ ಕೂತು ಮಾತನಾಡುತ್ತಿದ್ದಾರೆ. ಯಡಿಯೂರಪ್ಪನವರು ಕಾಂಗ್ರೆಸ್ ಮೇಲೆ‌ ಪರ್ಸೆಂಟೇಜ್ ಅಂತ ಅಪವಾದ ಹೊರಿಸಿದ್ದಾರೆ. ವಾಸ್ತವದಲ್ಲಿ ಯಡಿಯೂರಪ್ಪ ಪರ್ಸೆಂಟೇಜ್ ನ‌ ಪಿತಾಮಹರು ಎಂದು ತಿರುಗೇಟು ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ