ಚೆಸ್: ಮಂಡ್ಯದ ವಿದ್ಯಾರ್ಥಿನಿಯ ಸಾಧನೆ

#Chess #Nationals #Mandya

20-09-2018

ಮಂಡ್ಯ: ರಾಷ್ಟ್ರೀಯ ಮಟ್ಟದ ಶಾಲಾ ಚೆಸ್ ತಂಡಕ್ಕೆ‌ ಮಂಡ್ಯದ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಕಾವೇರಿ ಪಬ್ಲಿಕ್ ಶಾಲೆಯ ಪ್ರಣೀತಾ ರಾಷ್ಟ್ರೀಯ ಶಾಲಾ ಚೆಸ್ ತಂಡಕ್ಕೆ ಆಯ್ಕೆಯಾಗಿದ್ದು, ಕರ್ನಾಟಕದಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ತೆಲಂಗಾಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಾಲಾ ಚೆಸ್ ಪಂದ್ಯಾವಳಿಯಲ್ಲಿ 4ನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. ಮಂಡ್ಯ ಚೆಸ್ ಅಕಾಡೆಮಿಯಲ್ಲಿ ಪ್ರಣೀತಾ ತರಬೇತಿ ಪಡೆಯುತ್ತಿದ್ದು, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಪ್ರಣೀತಾಗೆ ಮಂಡ್ಯದ ಜನ, ಪ್ರಣೀತಾ ಪೋಷಕ ಮತ್ತು ತರಬೇತಿದಾರಿಂದ ಇವರ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chess Nationals ಪ್ರಣೀತಾ ಸಾಧನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ