ಮನೆಯಲ್ಲಿದ್ದ ಯುವಕನನ್ನು ಹೊರಗೆಳೆದು ಭೀಕರ ಕೊಲೆ!

#Hassan #Murder #Gang

19-09-2018

ಹಾಸನ: ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿದ್ದ ಯುವಕನೊಬ್ಬನನ್ನು ಹೊರಗೆ ಕರೆದು ಭೀಕರವಾಗಿ ಹತ್ಯೆ ಮಾಡಲಾಗಿದೆ. ನಗರದ ಬಂಬೂ ಬಜಾರ್ ನಿವಾಸಿಯಾಗಿದ್ದ ಕಿರಣ್(35) ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ನಗರದ ಶ್ರೀನಿವಾಸ, ರವಿ, ನಾಗರಾಜ ಸೇರಿ ಹಲವರು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಕುರಣ್  ಕ್ಷುಲ್ಲಕ ಕಾರಣಕ್ಕೆ ಜನರಿಗೆ ತೊಂದರೆ‌‌‌ ನೀಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗೆ ಕಿರಣ್ ಉಪಟಳ ಹೆಚ್ಚಾಗಿ ನೆನ್ನೆ ಮಧ್ಯಾಹ್ನವೂ ಕೂಡ ಗಲಾಟೆ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ರಾತ್ರಿ ಮನೆ ಬಳಿ ಬಂದು ಕಿರಣ್ ಗೆ ಮೇಲೆ‌ ಗುಂಪು ಮಾಡಿ ಕೊಲೆಗೈದಿದ್ದಾರೆ, ಕಿರಣ್ ಕಾಟ ತಾಳಲಾರದೆ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Murder Hassan ವಿಚಾರ ಮಾರಕಾಸ್ತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ