ವಿಪ್ರೊ ಗೆ ಮತ್ತೊಂದು ಬೆದರಿಕೆ ಇ-ಮೇಲ್ !

Kannada News

02-06-2017

ಬೆಂಗಳೂರು:- ನಗರದ ಪ್ರತಿಷ್ಟಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೊ ಗೆ ಮತ್ತೊಂದು ಇಮೇಲ್ ಬೆದರಿಕೆ ಬಂದಿದೆ. 72 ಗಂಟೆಯಲ್ಲಿ 500 ಕೋಟಿ ಹಣ ಪಾವತಿಸದಿದ್ದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಮೇಲ್ ಸಂದೇಶದಲ್ಲಿ ಬೆದರಿಸಲಾಗಿದ್ದು, ವಿಪ್ರೊ ಸಂಸ್ಥೆ ಬೆದರಿಕೆ ಇಮೇಲ್ ಬಂದಿರುವುದನ್ನು ಖಚಿತಪಡಿಸಿದೆ. ಕಳೆದ ಮೇ 5 ರಂದು ಅನಾಮಧೇಯರೊಬ್ಬರಿಂದ ವಿ ವಿಪ್ರೊ ಕಚೇರಿಗೆ ಒಂದು ಇಮೇಲ್ ಬಂದಿದ್ದು ಅದರಲ್ಲಿ 500 ಕೋಟಿ ರೂ ಕೊಡಿ, ಇಲ್ಲದಿದ್ದರೆ ನಿಮ್ಮ ಕಚೇರಿಯಲ್ಲಿ ಜೈವಿಕ ಭಯೋತ್ಪಾದನಾ ದಾಳಿ ಮೂಲಕ ವಿಧ್ವಂಸಕ ಕೃತ್ಯ ಎಸಗುತ್ತೇವೆ' ಎಂದು  ಬೆದರಿಸಲಾಗಿತ್ತು. ಇದಾಗಿ ತಿಂಗಳು ಕಳೆಯುವುದರಲ್ಲಿ ಮತ್ತೊಂದು ವಿಪ್ರೊ ಸಂಸ್ಥೆಗೆ ಮತ್ತೊಂದು ಇಮೇಲ್ ಬಂದಿದ್ದು, ಇದರಲ್ಲಿ 72 ಗಂಟೆಯಲ್ಲಿ ದುಡ್ಡು ಪಾವತಿಸದಿದ್ದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಲಾಗಿದೆ. ಮೇ 5 ರಂದು ಇಮೇಲ್ ಬೆದರಿಕೆ ಬಂದಾಗಲೇ ವಿಪ್ರೊ ಸಂಸ್ಥೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಸಲ್ಲಿಸಿತ್ತು. ಈ ಕುರಿತು ಬೆಳ್ಳಂದೂರು ಪುಲೀಸರು ತನಿಖೆ ನಡೆಸಿದ್ದು, ವಿಪ್ರೊ ಕಂಪನಿಯ ಮಾಜಿ ಅಥವಾ ಹಾಲಿ ಉದ್ಯೋಗಿಗಳೇ  ಈ ಕೆಲಸ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಮೊದಲ ಇಮೇಲ್, ಎರಡನೇ ಇಮೇಲ್ ಎರಡೂ ಒಂದೇ ಇಮೇಲ್ ಐಡಿಯಿಂದ ಬಂದಿದ್ದನ್ನು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. ಸ್ವಿಟ್ಜರ್‍ಲ್ಯಾಂಡ್‍ನ ಐಪಿ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ