ಬೀದರ್ ಬಿಜೆಪಿಯಲ್ಲಿ ಶುರುವಾಗಿದೆ ಲೆಟರ್ ವಾರ್

#B.S.Yeddyurappa #Bidar BJP #Bharath Khandre

19-09-2018

ಬೀದರ್: ಬಿ.ಎಸ್.ಯಡಿಯೂರಪ್ಪ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವಂತೆ ಬಿಜೆಪಿ ಕಾರ್ಯಕರ್ತ ಭರತ ಖಂಡ್ರೆ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆಯುತ್ತಿದ್ದಂತೆ, ಜಿಲ್ಲೆಯಲ್ಲೀಗ ಲೆಟರ್ ವಾರ್ ಶುರುವಾಗಿದೆ. ಭರತ ಖಂಡ್ರೆ ಯಡಿಯೂರಪ್ಪ ಅವರನ್ನ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಪತ್ರ ಬರೆದಿದ್ದರು. ಭಾಲ್ಕಿ ಬಿಜೆಪಿ ಘಟಕ ಇದನ್ನ ಖಂಡಿಸಿ ಪತ್ರದ ಮೂಲಕವೇ ಭರತ ಖಂಡ್ರೆಗೆ ಉತ್ತರಿಸಿದ್ದಾರೆ. ‘ಭರತ ಖಂಡ್ರೆಗೂ ಭಾರತೀಯ ಜನತಾ ಪಾರ್ಟಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಡಿಯೂರಪ್ಪ ಅವರ ವ್ಯಕ್ತಿತ್ವವನ್ನ ಗಮನಿಸಿ ಬಿಜೆಪಿ ಪಕ್ಷ ಅವರಿಗೆ ಆ ಸ್ಥಾನಮಾನ ನೀಡಿದ್ದಾರೆ. ದಿನಕ್ಕೊಂದು ರೀತಿ ವರ್ತಿಸುವ ಭರತ ಖಂಡ್ರೆ ಅಸ್ತಿತ್ವ ಏನು ಎಂಬುದು ಭಾಲ್ಕಿ ಜನರಿಗೆ ಗೊತ್ತು. ಅವರು ಇಂತಹ ಹುಚ್ಚುತನದ ಹೇಳಿಕೆಗಳನ್ನು ನೀಡುವುದು ನಿಲ್ಲಿಸಬೇಕು, ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ’ ಅಂತ ಎಚ್ಚರಿಸಿ ಪತ್ರ ಬರೆದಿದ್ದಾರೆ. ಇದರಿಂದ ಜಿಲ್ಲೆಯಲ್ಲೀಗ ಲೆಟರ್ ವಾರ್ ಶುರುವಾಗಿದೆ.


ಸಂಬಂಧಿತ ಟ್ಯಾಗ್ಗಳು

B.S.Yeddyurappa Bidar BJP ವ್ಯಕ್ತಿತ್ವ ಲೆಟರ್ ವಾರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ