ಕೆಎಸ್ಆರ್ಟಿಸಿ ಬಸ್ ಗಳ ಬ್ಯಾಟರಿ ಕದಿಯುತ್ತಿದ್ದವನ ಬಂಧನ

#KSRTC #Batteries # Theives # Arrested

19-09-2018

ಕೋಲಾರ: ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಬ್ಯಾಟರಿ ಕಳುವು ಮಾಡುತ್ತಿದ್ದ ಖದೀಮನನ್ನು ಕೆಎಸ್ಆರ್ಟಿಸಿ ಸಿಬ್ಬಂದಿಯೇ ಬಂಧಿಸಿದ್ದಾರೆ. ಕೊಲಾರದ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಬಸ್ ಗಳ ಬ್ಯಾಟರಿಗಳನ್ನು ಕಳುವು ಮಾಡುತ್ತಿದ್ದ ಖದೀಮ ಬಾಬಾ ಜಾನ್ ನನ್ನು ಬಂಧಿಸಲಾಗಿದ್ದು, ಆತನ ಗ್ಯಾಂಗನ ಮೂವರು ಪರಾರಿಯಾಗಿದ್ದಾರೆ.

ಬಾಬಾ ಜಾನ್ ಕೋಲಾರದ ನೂರ್ ನಗರದದ ನಿವಾಸಿ ಎಂದು ತಿಳಿದು ಬಂದಿದೆ. ನಾಲ್ಕೈದು ದಿನಗಳಿಂದ 25ಕ್ಕೂ ಹೆಚ್ಚು ಬ್ಯಾಟರಿಗಳ ಕಳುವು ಮಾಡಿರುವುದಾಗಿಯೂ, ಇಂದೂ ಕೂಡ  ಬೆಳಗಿನ ಜಾವ 3 ಗಂಟೆಯಲ್ಲಿ ಬ್ಯಾಟರಿ ಕಳುವು ಮಾಡುತ್ತಿದ್ದಾಗ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಆಟೋದಲ್ಲಿ ಬಂದು ಬ್ಯಾಟರಿ ಕಳುವು ಮಾಡುತ್ತಿದ್ದ ಖದೀಮರನ್ನು ಹಿಡಿಯಲೆಂದೇ ಹೊಂಚು ಹಾಕಿ ಕುಳಿತಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿ, ಬಾಬಾ ಜಾನ್ ಬಂಧನ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಮೂವರು ಖದೀಮರು ಪರಾರಿಯಾಗಿದ್ದಾರೆ. ಕೋಲಾರದ ಗಲ್ ಪೇಟೆ ಪೊಲೀಸರ ವಶಕ್ಕೆ ಬಾಬಾ ಜಾನ್ ನನ್ನು ಒಪ್ಪಿಸಲಾಗಿದ್ದು. ಗಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Arrested KSRTC ಬ್ಯಾಟರಿ ಖದೀಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ