'ಐಟಿ ಮತ್ತು ಇಡಿ ಕಿರುಕುಳ ಕೊಡಲು ಇರುವ ತನಿಖಾ ಸಂಸ್ಥೆಗಳಲ್ಲ’

#Rajnath Singh #IT,ED #Immigrants

18-09-2018

ಬೆಂಗಳೂರು: ಐಟಿ, ಇಡಿ ಯಾರಿಗೂ ಕಿರುಕುಳ ಕೊಡಲು ಇರುವ ತನಿಖಾ ಸಂಸ್ಥೆಗಳಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿಗೆ ಐಟಿ, ಇಡಿ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಐಟಿ, ಇಡಿ ಯಾರಿಗೂ ಕಿರುಕುಳ ನೀಡಲ್ಲ. ಆ ತರ ಯಾರೂ ಮಾಡಲ್ಲ. ಆ ರೀತಿ ಆರೋಪಗಳನ್ನು ಮಾಡಬಾರದು. ಅದು ಸರಿಯಲ್ಲ. ನೋಡಿ ನಾವೆಲ್ಲ ಇಲ್ಲಿ ಒಟ್ಟಾಗಿ ಕೂತಿಲ್ಲವೇ ಎಂದು ವಿವರಿಸಿದರು. ಕರ್ನಾಟಕದಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುವುದು.

ಸ್ವದೇಶಿ, ವಿದೇಶಿಗರು ಯಾರಿದ್ದಾರೆ ಎಂಬುದರ ಬಗ್ಗೆ ಆಯಾ ರಾಜ್ಯಗಳಿಗೆ ಮಾಹಿತಿ ಇರಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಕೊಡಗು ಪುನರ್ ನಿರ್ಮಾಣ ಕುರಿತು ಕೇಂದ್ರ ಸರಕಾರ ಕರ್ನಾಟಕದ ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Rajnath Singh ವಲಸಿಗರು ಆರೋಪ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ