‘ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡಲ್ಲ’

#Deputy Chairman #M.Krishna Reddy #Media

18-09-2018

ಚಿಕ್ಕಬಳ್ಳಾಪುರ: ‘ತಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವ ಮಾತೇ ಇಲ್ಲ ಎಂದು ಜೆಡಿಎಸ್ ಶಾಸಕ ಹಾಗು ಉಪಸಭಾಪತಿ ಎಂ.ಕೃಷ್ಣಾರೆಡ್ಡಿ ಹೇಳಿದ್ದಾರೆ. ಎಂ.ಕೃಷ್ಣಾರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ ಹಿನ್ನೆಲೆ, ಈ ಕುರಿತಂತೆ ಸ್ಪಷ್ಟಪಡಿಸಿದ ಅವರು ‘ತಾನು ಚಿಂತಾಮಣಿಯಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ. ಕ್ಷೇತ್ರದ ಜನತೆಗೆ ದ್ರೋಹ ಮಾಡುವುದಿಲ್ಲ. ಮಾಧ್ಯಮಗಳು ಅವರ ಖುಷಿಗೆ ನನ್ನ ಬಗ್ಗೆ ಏನೇನೋ ವರದಿ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ತೋರಿಸುವ ಅಂತೆ-ಕಂತೆಗಳಿಗೆ ನಾನು ಉತ್ತರಿಸುವುದಿಲ್ಲ.  ಬಿಜೆಪಿಗೆ ಸೇರುವ ವಿಚಾರ ಮಾಧ್ಯಮದವರಿಗೆ ಗೊತ್ತಾದರೆ ನನಗೆ ನೇರವಾಗಿ ದೂರವಾಣಿಯಲ್ಲಿ ಕೇಳಲಿ, ಎಂದು ಮಾಧ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಉಪಸಭಾಪತಿ.


ಸಂಬಂಧಿತ ಟ್ಯಾಗ್ಗಳು

M.Krishna Reddy Deputy Chairman ಚಿಂತಾಮಣಿ ಉಪಸಭಾಪತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ