ಬಿಜೆಪಿ ಪ್ರತಿ ಪಕ್ಷದ ಹಾಗೆ ವರ್ತಿಸುತ್ತಿಲ್ಲ: ಹೆಚ್.ವಿಶ್ವನಾಥ್

#H.Vishwanath #Yeddyurappa #JDS  #Politics

18-09-2018

ಬೆಂಗಳೂರು: 'ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕ ಇಳಿಕೆ ಮಾಡಿರುವ ಸಿಎಂ ಕುಮಾರಸ್ವಾಮಿ ಬದ್ಧತೆ ಪ್ರದರ್ಶಿಸಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕ ಇಳಿಕೆ ಮಾಡಲು ಪ್ರಾಂತೀಯ ಪಕ್ಷಗಳಿಗೆ ಹೈಕಮಾಂಡ್ ಕಡೆ ಮುಖ ಮಾಡುವ ಅಗತ್ಯ ಇಲ್ಲ. ಪ್ರಾಂತೀಯ ಪಕ್ಷ ಆಗಿರುವುದರಿಂದ ಸಿಎಂ ಇಂತಹ ದಿಟ್ಟ ನಿರ್ಧಾರ ಕೈಗೊಂಡರು. ನಾವು ನಮ್ಮ ಹೊಣೆಗಾರಿಕೆ ನಿಭಾಯಿಸಿದ್ದೇವೆ. ಇದರಿಂದ ಪ್ರಾದೇಶಿಕ ಪಕ್ಷಗಳ ಮಹತ್ವ ಜನರಿಗೆ ಗೊತ್ತಾಗುತ್ತದೆ ಎಂದರು. 

ಪೆಟ್ರೋಲ್, ಡೀಸೆಲ್ ದರಗಳು ಗಗನಮುಖಿಯಾಗಿವೆ. ಬಿಜೆಪಿಯವರು ಜನರಿಗೆ ಏನು ವಾಗ್ಧಾನ ಮಾಡಿದ್ರು? ಆದರೆ ಇವತ್ತು ಬಿಜೆಪಿ ಏನು ಮಾಡ್ತಿದೆ ಎಂದು ಜನ ನೋಡ್ತಿದ್ದಾರೆ' ಎಂದು ಕೇಂದ್ರ ಬಿಜೆಪಿಯನ್ನು ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಪ್ರತಿ ಪಕ್ಷದ ಹಾಗೆ ವರ್ತಿಸುತ್ತಿಲ್ಲ. ಇಂಧನ ದರ ಹೆಚ್ಚಳ ಹಿನ್ನೆಲೆ ಜನರ ಪರ ದನಿ ಎತ್ತಲಿಲ್ಲ. ಮೈತ್ರಿ ಸರ್ಕಾರಕ್ಕೆ ವಿಪಕ್ಷ ಬಿಜೆಪಿ ಸಲಹೆಯನ್ನೂ ಕೊಡುತ್ತಿಲ್ಲ. ಜನರ ಒಳಿತಿಗಾಗಿ ಬಿಜೆಪಿ ಏನೂ ಮಾಡುತ್ತಿಲ್ಲ. ಮೈತ್ರಿ ಸರ್ಕಾರವನ್ನು ಭಯದಲ್ಲಿರಿಸಲು ಬಿಜೆಪಿ ಹೊರಟಿದೆ. ಜನರನ್ನು ಬಿಜೆಪಿ ದಿಕ್ಕು ತಪ್ಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಯಡಿಯೂರಪ್ಪ ಕೊಡಗಿನ ಬಗ್ಗೆ ಸರ್ಕಾರದ ಗಮನ ಸೆಳೆಯಲಿಲ್ಲ, ಕೊಡಗಿನ ಶಾಸಕರೂ ಏನೂ ಮಾಡುತ್ತಿಲ್ಲ, ಬಿಜೆಪಿಗೆ ಜನರ ಕಷ್ಟಕ್ಕಿಂತ ರಾಜಕಾರಣವೇ ಮುಖ್ಯವಾಗಿದೆ. ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಸಂಚು ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯವರು ಪ್ರಧಾನಿಯವರನ್ನು ಭೇಟಿ ಮಾಡಿ, ಕೊಡಗು ಪುನರ್ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಕೇಳಲಿ ಎಂದು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H. Vishwanath Petrol-Diesel ಮೈತ್ರಿ ಸರ್ಕಾರ ಕೊಡಗು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ