'ಕುಮಾರಣ್ಣನಿಗೆ ಮೋಸ ಮಾಡುವುದಿಲ್ಲ' ಎಂದ ಜೆಡಿಎಸ್ ಶಾಸಕ

#Operation kamala #JDS MLA # Devanand Chavan

18-09-2018

ವಿಜಯಪುರ: ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಆಪರೇಷನ್ ಕಮಲ ವಿಚಾರದ ಕುರಿತು, ವಿಜಯಪುರದ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಪ್ರತಿಕ್ರಿಯಿಸಿ, ‘ತಾನು ಜೆಡಿಎಸ್ ಪಕ್ಷ ಬಿಟ್ಟು ಬೇರೆಡೆ ಹೋಗುವುದಿಲ್ಲ. ಹೋಗುವ ಅವಶ್ಯಕತೆಯೂ ಇಲ್ಲ. ಕುಮಾರಣ್ಣಗೆ ತಾನು ಮೋಸ ಮಾಡುವುದಿಲ್ಲ’ ಎಂದಿದ್ದಾರೆ.

‘ಕಳೆದ ಬಾರಿ ಬಿಜೆಪಿ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಆಗ ನಾನು ಅವರ ಆಹ್ವಾನಕ್ಕೆ ಸೊಪ್ಪು ಹಾಕಿಲ್ಲ. ಈಗ ಯಾವುದೇ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ. ಆಫರ್ ನೀಡಿದರೂ ಹೋಗೋದಿಲ್ಲ. ಸಿಎಂ ಕುಮಾರಸ್ವಾಮಿಯವರ ಮನೆಯ ಅನ್ನ ತಿಂದಿದ್ದೇನೆ, ದ್ರೋಹ ಮಾಡಲ್ಲ. ತಾನು ಬಿಜೆಪಿಗೆ ಸೇರಲಿದ್ದೇನೆ ಅನ್ನೋದು ಶುದ್ಧ ಸುಳ್ಳು, ಹೆಚ್ಡಿಕೆ ನಮ್ಮ ನಾಯಕರು. ಪಕ್ಷ ಬಿಡುವ ಯೋಜನೆ ಅಥವಾ ಯೋಚನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

operation kamala Devananda chavan ನಾಯಕ ಯೋಚನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ