ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ: ಪ್ರಕಾಶ್ ರೈ

#Prakash Raj #Pratap Simha #Twitter

18-09-2018

ಮೈಸೂರು: ‘ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ’ ಎಂದು ಬಹುಭಾಷಾ ನಟ ಪ್ರಕಾಶ್ ರೈ, ಸಂಸದ ಪ್ರತಾಪ್ ಸಿಂಹ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಕೊಡಗಿನಲ್ಲಿ ಭೀಕರ ಪ್ರವಾಹ ಹಿನ್ನೆಲೆ ಕೇಂದ್ರ ಪ್ರಕೃತಿ ವಿಕೋಪ ತಂಡ ಕೊಡಗಿನ ಹೆಬ್ಬೆಟ್ಟಗೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ, ಅಲ್ಲೇ ಇದ್ದ ಸಂಸದ ಪ್ರತಾಪಸಿಂಹ ಅವರಿಗೆ ಅಲ್ಲಿನ ಮುಖಂಡ ದೇವಯ್ಯ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪ್ರತಾಪಸಿಂಹ ಅವರು ಫೇಸ್ ಬುಕ್ ಲೈವ್ ಗೆ ಬಂದು ದೇವಯ್ಯ ಅವರ ವಯಸ್ಸಿನ ಅಂತರ ನೋಡಿ ಸುಮ್ಮನಾಗಿದ್ದೀನಿ ಎಂದು ಹೇಳಿಕೊಂಡಿದ್ದರು.

ಇವೆರಡು ಚಿತ್ರಣಗಳ ಬೆನ್ನೆಲ್ಲೇ ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ 'ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ..ಹೀಗೂ ಉಂಟೆ’ ಎಂದು ಪ್ರತಾಪ್ ಸಿಂಹ ವಿರುದ್ಧ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Pratap Simha Prakash Rai ಟ್ವೀಟ್ ಚಿತ್ರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ