ರಾಜ್ಯದ ಜನರಿಗೆ ಸಿಎಂ ಇಂದೇ ಸ್ಪಷ್ಟೀಕರಣ ಕೊಡಲಿ: ಬಿಎಸ್ವೈ

#B.S.Yeddyurappa # H.D.Kumaraswamy

18-09-2018

ಬೆಂಗಳೂರು: ‘ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಎ.ಮಂಜು ಮಾಡಿರುವ ಭೂ ಹಗರಣ ಆರೋಪದ ವಿಚಾರಕ್ಕೆ ಈಗ ಸಿಎಂ ಯಾಕೆ ಮೌನವಾಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜೂಜುಕೋರರು, ಇಸ್ಪೀಟು ದಂಧೆ ಬಗ್ಗೆ ಮಾತಾಡುವವರು ಯಾಕೆ ಮೌನ ವಹಿಸಿದ್ದಾರೆ? ನೀವು ಯಾರಿಗೆ ಕಡಿಮೆ ಇದ್ದೀರಿ? ಸ್ಪಷ್ಟೀಕರಣ ನೀಡಿ. ಇದು ಯಾವ ಕ್ರಿಮಿನಲ್ ಅಪರಾಧಕ್ಕಿಂತ ಕಡಿಮೆ ಇದೆ? ಈ ಬಗ್ಗೆ ಸಿಎಂ ರಾಜ್ಯದ ಜನರಿಗೆ ಇವತ್ತೇ ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಿಮಗೆ ಇನ್ನೊಬ್ಬರ ಬಗ್ಗೆ ಮಾತಾಡುವ ಹಕ್ಕು ಏನಿದೆ? ಬಿಜೆಪಿ ಬಗ್ಗೆ ಟೀಕೆ ಮಾಡುವ ನೀವು ಭ್ರಷ್ಟಾಚಾರ ಮಾಡುವುದರಲ್ಲಿ ಯಾರಿಗೆ ಕಡಿಮೆ ಇದ್ದೀರಿ? ಭೂ ಹಗರಣ ಬಗ್ಗೆ ನಾವು ಆರೋಪ ಮಾಡಿಲ್ಲ, ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದಾರೆ, ನಾಚಿಕೆಯಾಗಬೇಕಿತ್ತು ನಿಮ್ಮ ನಡವಳಿಕೆಗೆ' ಎಂದು ಕಟುವಾಗಿ ಟೀಕಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ