ವಿಷ್ಣುದಾದಾ ಹುಟ್ಟುಹಬ್ಬ: ಅಭಿಮಾನಿಗಳಿಂದ ಪುಷ್ಪನಮನ

#Sandalwood #Vishnuvardhan  #Abhiman Studio

18-09-2018

ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನ ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ, ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನ್ ಸ್ಟುಡಿಯೋಗೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿಷ್ಣು ಅಭಿಮಾನಿಗಳು ಆಗಮಿಸಿದ್ದು, ವಿಷ್ಣು ಸಮಾಧಿಗೆ ನಮಿಸಿ, ನೆಚ್ಚಿನ ನಟನಿಗೆ ಅಭಿಮಾನದ ಗೌರವ ಸಲ್ಲಿಸುತ್ತಿದ್ದಾರೆ. ವಿಷ್ಣು ಹುಟ್ಟು ಹಬ್ಬಕ್ಕೆ ಆಗಮಿಸಿರುವ ಸಾರ್ವಜನಿಕರಿಗೆ, ಅಭಿಮಾನಿಗಳಿಂದ ಸ್ಟುಡಿಯೋ ಬಳಿ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಮಾಧಿ ಸ್ಥಳದಲ್ಲಿ ಅಭಿಮಾನಿಗಳಿಂದ ವಿಷ್ಣುದಾದಾರಿಗೆ ಜೈಕಾರ ಹಾಕುತ್ತ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.

ಮತ್ತೊಂದೆಡೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಜೆಪಿ ನಗರದ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಹಾಗು ಅನಿರುಧ್ ಅವರು ಕೂಡ ಪೂಜೆ ಸಲ್ಲಿಸಲಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಸಮಾಧಿ ಸ್ಥಳಕ್ಕೆ ಅಗಮಿಸದಿರಲು ತಿರ್ಮಾನಿಸಿದ್ದು, ಮನೆಯಲ್ಲಿಯೇ ಪೂಜೆ ಸಲ್ಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sandalwood Vishnuvardhan ಅಭಿಮಾನಿ ಜೈಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ