ಮೈಸೂರಲ್ಲಿ ಮತ್ಸ್ಯ ಮೇಳಕ್ಕೆ ಚಿಂತನೆ

#Vijayadashami  #Matsya mela #Dasara

18-09-2018

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಯುಕ್ತ ಈ ಬಾರಿ ಮೈಸೂರಲ್ಲಿ ಮತ್ಸ್ಯಮೇಳ ಆಯೋಜಿಸಲು ಚಿಂತನೆ ನಡೆದಿದೆ. ಮೀನುಗಾರಿಕಾ ಇಲಾಖೆ ಹಾಗು ಜಿಲ್ಲಾಡಳಿತದ ಸಹಯೋಗದಲ್ಲಿ ಮೈಸೂರಿನ ಜೆ.ಕೆ.ಮೈದಾನದಲ್ಲಿ ಅಕ್ಟೋಬರ್ 12ರಿಂದ ಮೂರು ದಿನಗಳ ಕಾಲ ಪ್ರದರ್ಶನಕ್ಕೆ ಯೋಜನೆ ಮಾಡಲಾಗುತ್ತಿದೆ. ದೇಶ-ವಿದೇಶಗಳ ಅಪರೂಪದ‌ ಹಾಗು ಬಣ್ಣ ಬಣ್ಣದ ಅಲಂಕಾರಿಕ‌ ಮೀನುಗಳು, 40 ಬಗೆ ಬಗೆಯ ಅಪರೂಪದ ಮೀನುಗಳ ಪ್ರದರ್ಶನ ಮತ್ತು ಮಾರಾಟಕ್ಕೆ, ಕೃಷಿ ಮೇಳದ ಒಂದು ಭಾಗವಾಗಿ ಮತ್ಸ್ಯಮೇಳಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಇದಕ್ಕಾಗಿ ಟನಲ್‌ ಅಕ್ವೇರಿಯಂ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ಮತ್ಸ್ಯಮೇಳ ನಡೆಯಲಿದೆ.


ಸಂಬಂಧಿತ ಟ್ಯಾಗ್ಗಳು

Vijayadashami Matsya mela ಮೀನುಗಾರಿಕೆ ಮಹೋತ್ಸವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ