‘ಶೀಘ್ರದಲ್ಲೇ ಭೂ ನ್ಯಾಯ ಮಂಡಳಿಗಳ ರಚನೆ’

#Bagar Hukum #R.V.Deshpande

17-09-2018

ಬೆಂಗಳೂರು: ಅಕ್ರಮವಾಗಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರ ಭೂಮಿಯನ್ನು ಸಕ್ರಮಗೊಳಿಸುವ ಮತ್ತೊಂದು ಹಂತದ ಯೋಜನೆ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಕಂದಾಯ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದೆ. ಹೊಸ ತಿದ್ದುಪಡಿಯಂತೆ ಫಾರಂ ನಂತರ 57ರಡಿ ಅಕ್ಟೋಬರ್ 1 ರಿಂದ ಬರುವ 2019ರ ಮಾರ್ಚ್ 16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2005ರ ಜನವರಿ 1ಕ್ಕೂ ಮುನ್ನ ಸಾಗುವಳಿ ಮಾಡುತ್ತಿರವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳ ವಿಲೇವಾರಿಗಾಗಿ ಸರ್ಕಾರ ಶೀಘ್ರದಲ್ಲೇ ಭೂ ನ್ಯಾಯ ಮಂಡಳಿಗಳನ್ನು ರಚಿಸಲಿದೆ ಎಂದು ದೇಶಪಾಂಡೆ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Bagar Hukum R.V.Deshpande ತಿದ್ದುಪಡಿ ಕಂದಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ