ವೇಗವಾಗಿ ಬೈಕ್  ಚಲಾವಣೆ ತಾಯಿ ಮೃತಿ !

Kannada News

02-06-2017 431

ಬೆಂಗಳೂರು:- ಕುಮಾರಸ್ವಾಮಿ ಲೇಔಟ್‍ನ ಮಲ್ಲಸಂದ್ರ ರಸ್ತೆಯಲ್ಲಿ ಗುರುವಾರ ರಾತ್ರಿ ರಸ್ತೆ ಹಂಪ್ ಬಳಿ ವೇಗವಾಗಿ ಬೈಕ್ ಎಗರಿದ್ದರಿಂದ ಹಿಂದೆ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ, ಆದರೆ ಮಗ ಆಪಾಯದಿಂದ ಪಾರಾಗಿದ್ದಾನೆ. ಮೃತರನ್ನು ತಲಘಟ್ಟಪುರದ ಬೈಯನಪಾಳ್ಯದ ಕವಿತಾ (40) ಎಂದು ಗುರುತಿಸಲಾಗಿದೆ. ಪಿಯುಸಿ ಓದುತ್ತಿದ್ದ ಅವರ ಪುತ್ರ ರೂಪೇಶ್ (18) ಪಾರಾಗಿದ್ದಾನೆ. ಮಲ್ಲಸಂದ್ರ ರಸ್ತೆಯ ಕುಮಾರನ್ ಸ್ಕೂಲ್ ಬಳಿ ಕವಿತಾ ಅವರು ತರಕಾರಿ ಅಂಗಡಿ ನಡೆಸುತ್ತಿದ್ದರು. ತರಕಾರಿ ವ್ಯಾಪಾರ ಮುಗಿಸಿಕೊಂಡು ರಾತ್ರಿ 11ರ ವೇಳೆ ಮನೆಗೆ ಮಗನ ಬೈಕ್‍ನಲ್ಲಿ ಹಿಂದೆ ಕುಳಿತು ಹೆಲ್ಮೆಟ್ ಹಾಕದೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮನೆಗೆ ಹೋಗುವ ಆತುರದಲ್ಲಿ ರೂಪೇಶ್ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಲ್ಲಸಂದ್ರ ರಸ್ತೆಯ ಕುಮಾರನ್ ಸ್ಕೂಲ್ ಬಳಿ ರಸ್ತೆ ಹಂಪ್ ಎಗರಿಸಿ ಮುಂದೆ ಹೋಗಿದ್ದಾನೆ. ಹಿಂದೆ ಕುಳಿತಿದ್ದ ಕವಿತಾ ಕೆಳಗೆ ಬಿದ್ದಿದ್ದು, ಸ್ವಲ್ಪ ದೂರ ಹೋದ ನಂತರ ತಾಯಿ ಹಿಂದೆ ಇರದಿರುವುದು ಗೊತ್ತಾಗಿದೆ. ಕೂಡಲೇ ಹಿಂತಿರುಗಿ ಬಂದ ರೂಪೇಶ್, ಹಂಪ್ಸ್ ಬಳಿ ಬಂದು ನೋಡಿದಾಗ ತಾಯಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ