‘ಹೆಚ್.ಡಿ.ದೇವೇಗೌಡರ ವಿರುದ್ಧ ಭೂಕಬಳಿಕೆ ಆರೋಪ’

#H.D.Deve Gowda #A.Manju #Land

17-09-2018

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದಾರೆ ಮಾಜಿ ಸಚಿವ ಎ.ಮಂಜು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಸೋಮನಹಳ್ಳಿ ಕಾವಲಿನಲ್ಲಿರುವ ಸರ್ಕಾರಿ ಜಾಗವನ್ನು ದೇವೇಗೌಡರ ಮೊಮ್ಮಗ ಪ್ರಜ್ವಲ್ ಹಾಗೂ ಅತ್ತೆ ಕಾಳಮ್ಮ ನವರ ಹೆಸರಲ್ಲಿ ಕಬಳಿಕೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ತಹಶೀಲ್ದಾರರ ಮೂಲಕ‌ವೇ ಸುಳ್ಳು ದಾಖಲೆ ಸೃಷ್ಟಿಸಿದ್ದು, ಕಾನೂನು ಬಾಹಿರವಾಗಿ ಭೂಮಿ ಸಾಗುವಳಿ‌ ಮಾಡಿಕೊಟ್ಟಿದ್ದಾರೆ ಅಧಿಕಾರಿಗಳು’ ಎಂದು ದೂರಿದ್ದಾರೆ. ಈ‌ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ಕಬಳಿಕೆ ಮಾಡಿರುವ ಭೂಮಿಯನ್ನು ಸರ್ಕಾರ‌ ಜಪ್ತಿ ಮಾಡಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎ.ಮಂಜು ಎಚ್ಚರಿಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

A. Manju H.D.Deve Gowda ಸುದ್ದಿಗೋಷ್ಠಿ ಸಾಗುವಳಿ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ