ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ತರಗತಿ!

#Schools #Police #crime

17-09-2018

ಬೆಂಗಳೂರು: ಶಾಲಾ-ಕಾಲೇಜು ಹಂತದಲ್ಲಿಯೇ ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಕಾನೂನು ಸುವ್ಯವಸ್ಥೆ ಬಗ್ಗೆ ಅರಿವು ಮೂಡಿಸಲು ನಗರ ಪೊಲೀಸ್ ಅಧಿಕಾರಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪಾಠ ಮಾಡಲಿದ್ದಾರೆ.

ದೈಹಿಕ ಶಿಕ್ಷಣದ ತರಗತಿ ಮಾದರಿಯಲ್ಲೇ ಪೊಲೀಸ್ ತರಗತಿ ಕೂಡ ಮಕ್ಕಳಿಗೆ ಆರಂಭವಾಗಿದೆ. ಈಗಾಗಲೇ ಕೆಲವೊಂದು ಕಡೆ ಪೊಲೀಸರು ಶಾಲೆಗಳಿಗೆ ತೆರಳಿ ಪಾಠ ಮಾಡಿ ಕಾನೂನು ಹಾಗೂ ಅಪರಾಧದ ಅರಿವು ಮೂಡಿಸುತ್ತಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಳಮಟ್ಟದಿಂದಲೇ ಸದೆ ಬಡಿಯಲು ಪೊಲೀಸರು ರೂಪಿಸಿರುವ ಹೊಸ ಕಾರ್ಯಕ್ರಮ ಇದಾಗಿದೆ.

ನಗರದ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರುಗಳು ಇನ್ಸ್ಪೆಕ್ಟರ್ ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಭೇಟಿ ಕೊಟ್ಟು ಠಾಣೆ, ಠಾಣಾಧಿಕಾರಿಗಳ ಕಾರ್ಯವ್ಯಾಪ್ತಿ ಕುರಿತು, ಅಪರಾಧ ಪ್ರಕರಣದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಿದ್ದಾರೆ. ತಾವು ಪಾಠ ಮಾಡಿದ, ಭೇಟಿ ಕೊಟ್ಟ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಕೂಡ ತರಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

Police Schools ದೈಹಿಕ ಶಿಕ್ಷಣ ಸಹಾಯಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ