ತೆಲಂಗಾಣ ರಾಜ್ಯವು ಒಂದು ಕುಟುಂಬದ ಲಾಭಕ್ಕಾಗಿ ನಿರ್ಮಾಣವಾಗಿಲ್ಲ !

Kannada News

02-06-2017

ತೆಲಂಗಾಣ :- ತೆಲಂಗಾಣ ಸರ್ಕಾರ ಸರಿಯಾದ ಮಾರ್ಗದಲ್ಲಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ತೆಲಂಗಾಣ ರಾಜ್ಯವು ಒಂದು ಕುಟುಂಬದ ಲಾಭಕ್ಕಾಗಿ  ಮಾತ್ರ ನಿರ್ಮಾಣವಾಗಿಲ್ಲ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ. ತೆಲಂಗಾಣದಲ್ಲಿ  ಸಾರ್ವಜನಿಕ ಭಾಷಣವೊಂದರಲ್ಲಿ ಮಾತನಾಡುತ್ತ ರಾಹುಲ್ ಗಾಂಧಿ ತೆಲಂಗಾಣ ಮುಖ್ಯ ಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.  ಚಂದ್ರಶೇಖರ್ ರಾವ್ ಅವರನ್ನು ಕೇಂದ್ರೀಕರಿಸಿ ಮಾತನಾಡಿದ ಅವರು ತೆಲಂಗಾಣ ಸರ್ಕಾರ ಉತ್ತಮ ಪ್ರಾರಂಭ ಮಾಡಿಲ್ಲ ಎಂದರು. ವಿದ್ಯಾರ್ಥಿಗಳು ಮತ್ತು ರೈತರು ಪ್ರತ್ಯೇಕ ತೆಲಂಗಾಣಕ್ಕೆ ಹೋರಾಡಿರುವುದು ಒಂದು ಕುಟುಂಬದ ಲಾಭಕ್ಕಾಗಿ ಅಲ್ಲ , ಪ್ರತ್ಯೇಕ ರಾಜ್ಯವು ಇಲ್ಲಿನ ಜನರಿಗಾಗಿ ಎಂದರು. ಅಲ್ಲದೆ ವಿದ್ಯಾರ್ಥಿಗಳನ್ನು, ಮಹಿಳೆಯರನ್ನು, ಹಿಂದುಳಿದ ವರ್ಗದವನ್ನು ನಿರ್ಲಕ್ಷಿಸಿದ್ದಾರೆ, ಕೇವಲ ಕಾಂಟ್ರಾಕ್ಟರ್ ಗಳು ಮತ್ತು ಭೂ ಮಾಫಿಯಾದವರು ಲಾಭ ಹೊಂದುತ್ತಿದ್ದಾರೆ. ತೆಲಂಗಾಣದಲ್ಲಿ ಯುವಕರಿಗೆ ಉದ್ಯೋಗಗಳು ಸೃಷ್ಟಿಯಾಗಿಲ್ಲ, ನಿರುದ್ಯೋಗ ತಾಂಡವವಾಡುತ್ತಿದೆ. ಇದಕ್ಕೆ ಉತ್ತರಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ