ಗಬ್ಬು ನಾರುತ್ತಿದೆ ಗ್ರಂಥಾಲಯ!

#library #animals #garbage

17-09-2018

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಶಾಖೆ ಜಿಲ್ಲಾ ಕೇಂದ್ರ ಗ್ರಂಥಾಲಯ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕುರಿ-ಮೇಕೆಗಳ ವಾಸಸ್ಥಾನವಾಗಿದೆ. ಗ್ರಂಥಾಲಯದ ಮುಂದೆಯೇ ಕಸದ ರಾಶಿ ಬಿದ್ದಿದ್ದು, ವಿಲೇವಾರಿಯಾಗಿಲ್ಲ. ಇದರಿಂದ ಗ್ರಂಥಾಲಯದ ಅವರಣ ಗಬ್ಬು ನಾರುತ್ತಿದೆ. ಇದಲ್ಲದೆ ಶೌಚಾಲಯ ದುರ್ನಾತಕ್ಕೆ ಓದುಗರು ಬೇಸತ್ತಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಇಲಾಖೆ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಗ್ರಂಥಾಲಯದ ಆವರಣಕ್ಕೆ ಲಗ್ಗೆ ಇಡುವ ದನಕರುಗಳು ಅಲ್ಲೇ ಬೀಡುಬಿಟ್ಟಿರುತ್ತವೆ. ನೂರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರ ಅವ್ಯವಸ್ಥೆಯ ಗೂಡಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಸರೆಯಾಗಿರುವ ಗ್ರಂಥಾಲಯದ ಸ್ಥಿತಿ ಹೀಗಿದ್ದು, ದುರ್ನಾತದ ನಡುವೆಯೇ ವಿದ್ಯಾರ್ಥಿಗಳು ಓದಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನಾದರೂ ಗ್ರಂಥಾಲಯ ಇಲಾಖೆ, ಚಿಂತಾಮಣಿ ನಗರಸಭೆ ಈ ಬಗ್ಗೆ ಗಮನ ಹರಿಸಿ ಗ್ರಂಥಾಲಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ವಿದ್ಯಾರ್ಥಿಗಳು, ಓದುಗರು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

library students ದನಕರು ಉತ್ತಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ