ಬಸ್ ನಲ್ಲೇ ವಿದ್ಯಾರ್ಥಿಯನ್ನು ಥಳಿಸಿದ ಕಂಡಕ್ಟರ್

#students #Bus Conductor

15-09-2018

ಯಾದಗಿರಿ: ಬಸ್ ನಿಲ್ಲಿಸುವ ವಿಚಾರವಾಗಿ ಕಂಡಕ್ಟರ್ ಮತ್ತು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿರುವ ಘಟನೆ ಶಹಾಪೂರ ತಾಲ್ಲೂಕಿನ ಇಬ್ರಾಹಿಂಪುರ ಕ್ರಾಸ್ ಬಳಿ ನಡೆದಿದೆ. ಇಬ್ರಾಹಿಂಪುರ ಕ್ರಾಸ್ ನಿಂದ ದೋರನಹಳ್ಳಿ ಶಾಲೆಗೆ ಹೋಗುವ ವೇಳೆ ಬಸ್ ನಿಲ್ಲಿಸುವ ವಿಚಾರವಾಗಿ ಕಂಡಕ್ಟರ್ ಮತ್ತು ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿ ಬಸ್ ನಲ್ಲೇ ವಿದ್ಯಾರ್ಥಿಗೆ ಆವಾಜ್ ಹಾಕಿ, ಥಳಿಸಿದ್ದಾರೆ ಕಂಡಕ್ಟರ್. ಶಹಾಪೂರ ಬಸ್ ಡಿಪೋ ಕಂಡಕ್ಟರ್ ಸಾಗರ್ ಎಂಬ ವಿದ್ಯಾರ್ಥಿಗೆ ಥಳಿಸಿದ್ದಾರೆ. ಸಾಗರ ದೋರನಹಳ್ಳಿ ಹೈಸ್ಕೂಲ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ಯುವಕನಿಗೂ ಕಂಡಕ್ಟರ್ ಆವಾಜ್ ಹಾಕಿದ್ದಾರೆ. ಕಂಡಕ್ಟರ್ ವರ್ತನೆಗೆ ಬಸ್ಸಿನಲ್ಲಿದ್ದವರು ಆಕ್ರೋಶಗೊಂಡಿದ್ದಾರೆ. ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Bus Conductor students ಆವಾಜ್ ಥಳಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ