ಬಿಜೆಪಿಗೆ ಎರಡು ಎಂಪಿ ಸೀಟು ಕೂಡ ಬರಲ್ಲ: ವೀರಪ್ಪ ಮೊಯಿಲಿ

#M.Visvesvaraya  #Veerappa Moily

15-09-2018

ಚಿಕ್ಕಬಳ್ಳಾಪುರ: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ ಎಂದು ಮೊನ್ನೆಯಷ್ಟೇ ಬಿಜೆಪಿಗೆ ಟಾಂಗ್ ಕೊಟ್ಟಿದ್ದರು ಸಂಸದ ವೀರಪ್ಪ ಮೊಯಿಲಿ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕೆಡವಿದರೆ ಬಿಜೆಪಿಗೆ ಎರಡು ಎಂ.ಪಿ.ಸೀಟು ಕೂಡ ಬರಲ್ಲ ಎಂದು ಲೇವಡಿ ಮಾಡಿದ್ದಾರೆ.

'ಬಿಜೆಪಿಯವರ ಹಣದ ಆಮಿಷಕ್ಕೆ ತಮ್ಮ ಶಾಸಕರು ಬಗ್ಗಲ್ಲ. ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಕೆಲವು ಮಾಫಿಯಾಗಳು ಸಮ್ಮಿಶ್ರ ಸರ್ಕಾರ ಬೀಳಿಸಲು ಯತ್ನಿಸುತ್ತಿವೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಮಾಡಿರುವ ಆರೋಪದಲ್ಲಿ ಸತ್ಯಾಂಶ ಇರುತ್ತೆ. ಈ ಹಿಂದೆ ಆಪರೇಷನ್ ಕಮಲ ಮಾಡಿ ಬಿಜೆಪಿಗೆ ನಷ್ಟ ಸಂಭವಿಸಿದೆ ಎಂದರು. ಮಾಧ್ಯಮದವರು ಜಾರಕೊಹೊಳಿ ಬ್ರದರ್ಸ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಒಬ್ಬ ಜಾರಕಿಹೊಳಿ ಮತ್ತೊಬ್ಬರು ಈ ಪಕ್ಷ ಹಾಗೂ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Veerappa Moily M.Visvesvaraya ಮಾಧ್ಯಮ ಆಪರೇಷನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ