ನಕಲಿ ವೈದ್ಯರು: ಓರ್ವ ಸಿಕ್ಕಿಬಿದ್ದ-ಮೂವರ ವಿರುದ್ಧ ಎಫ್ಐಆರ್

#fake doctors #tumkur #Health officers

15-09-2018

ತುಮಕೂರು: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇವರ ವಿರುದ್ಧ ಸಮರ ಸಾರಿರುವ ಆರೋಗ್ಯಾಧಿಕಾರಿಗಳು ನಿನ್ನೆ ರಾತ್ರೋ ರಾತ್ರಿ ದಾಳಿ ಮಾಡಿ ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿರಾ ತಾಲ್ಲೂಕಿನ ಬರಗೂರಿ‌ನಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನಕಲಿ ವೈದ್ಯನಾಗಿರುವ ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಬಂಧಿಸಿದ್ದಾರೆ, ಮತ್ತು ನಾಲ್ವರು ನಕಲಿ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಕಲಿ ವೈದ್ಯ ಡಾ.ನಾಗರಾಜ್, ಹುಲಿಕುಂಟೆ ಗ್ರಾಪಂ ಅಧ್ಯಕ್ಷರೂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಈತ ಬರಗೂರಲ್ಲಿ ಕ್ಲಿನಿಕ್‌ ತೆರೆದಿದ್ದ.

ನಕಲಿ ವೈದ್ಯರ ಕುರಿತು ದೂರುಗಳು ಬಂದ ಹಿನ್ನೆಲೆ, ರಾತ್ರೋ‌ ರಾತ್ರಿ ಆರೋಗ್ಯಾಧಿಕಾರಿ ಡಾ.ಚಂದ್ರಕಲಾ‌ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ನಾಗರಾಜ್ ಕ್ಲಿನಿಕ್ ಮೇಲೆ ದಾಳಿಯಾಗುತ್ತಿದ್ದಂತೆ ಇತರೆ ಮೂವರು ನಕಲಿ ವೈದ್ಯರು ಎಸ್ಕೇಪ್ ಆಗಿದ್ದಾರೆ. ಚಂದ್ರಶೇಖರ್, ಇಮ್ರಾನ್, ರಾಜಶೇಖರ್ ತಲೆ ಮರೆಸಿಕೊಂಡಿರುವ ನಕಲಿ ವೈದ್ಯರು. ಘಟನೆ ಸಂಬಂಧ ಪಟ್ಟನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

fake doctor tumkur ನಕಲಿ ಎಫ್ಐಆರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ