ನಾಳೆಯಿಂದ ಎರಡನೇ ಹಂತದ ಗಜಪಡೆಗೆ ತಾಲೀಮು

#Mysore #dasara #ambari

15-09-2018

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಈಗಾಲೇ ಭಾರೀ ಸಿದ್ಧತೆಗಳು ನಡೆಯುತ್ತಿದ್ದು, ನಿನ್ನೆಯಷ್ಟೇ ಅರಮನೆ ಆವರಣಕ್ಕೆ ಎರಡನೇ ಹಂತದ ದಸರಾ ಗಜಪಡೆ ಕಾಲಿಟ್ಟಿದೆ. ಈ ತಂಡದಲ್ಲಿ ಅಭಿಮನ್ಯು, ಬಲರಾಮ, ದ್ರೋಣ, ಪ್ರಶಾಂತ, ಕಾವೇರಿ, ವಿಜಯ ಆನೆಗಳಿವೆ, ಇವುಗಳ ತೂಕ ಪರೀಕ್ಷೆ ಕೂಡ ನಡೆದಿದೆ.

ಎರಡನೇ ತಂಡದಲ್ಲಿ ಬಂದ ಅಭಿಮಾನ್ಯ 4930 ಕೆ.ಜಿ, ಬಲರಾಮ 4910 ಕೆ.ಜಿ, ಪ್ರಶಾಂತ 4650 ಕೆ.ಜಿ,  ದ್ರೋಣ 3900 ಕೆ.ಜಿ, ಕಾವೇರಿ 2830 ಕೆ.ಜಿ, ವಿಜಯ 2790 ಕೆ.ಜಿ  ಇವೆ ಎಂದು ತಿಳಿದು ಬಂದಿದೆ. ನಾಳೆಯಿಂದ ಮೊದಲ ಹಂತದ ಗಜಪಡೆಯ ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ತಾಲೀಮು ಶುರುವಾಗಲಿದೆ. ಈಗಾಗಲೇ ಮೊದಲ ಹಂತದ ತಂಡಕ್ಕೆ ಭಾರ ಹೊರುವ ತಾಲೀಮು ಶುರು ಮಾಡಲಾಗಿದೆ. ಒಟ್ಟಾರೆ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗಿವೆ.


ಸಂಬಂಧಿತ ಟ್ಯಾಗ್ಗಳು

Mysore dasara ದ್ರೋಣ ಕ್ಯಾಪ್ಟನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ