‘175 ಕೋಟಿ ರೂ.ವೆಚ್ಚದಲ್ಲಿ ಕಿಂಡಿ ಅಣೆಕಟ್ಟು’

#C.S.Puttaraju #Irrigation #Dam

14-09-2018

ಮಂಗಳೂರು: ಮಂಗಳೂರು ತಾಲ್ಲೂಕಿನ ಅಡ್ಯಾರ್-ಹರೇಕಳ ಮಧ್ಯೆ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ಸೇತುವೆಯನ್ನು ಸುಮಾರು 175 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

ನೇತ್ರಾವತಿ ನದಿ ತೀರದ ಹರೇಕಳ ಪಾವೂರು ಕಡವಿನ ಬಳಿ ಅವರಿಂದು ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸೇತುವೆ ನಿರ್ಮಾಣ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದು, ಎರಡು ವರ್ಷದೊಳಗೆ ಸೇತುವೆ ನಿರ್ಮಿಸಲಾಗುವುದು, ಯೋಜನೆಯಿಂದ ಜಮೀನು ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಕಿಂಡಿ ಅಣೆಕಟ್ಟು ಮೂಲಕ ಸಂಗ್ರಹಿಸಲಾಗುವ ನೀರನ್ನು ಕೃಷಿ ಉಪಯೋಗ ಹಾಗೂ ಕುಡಿಯಲು ಬಳಸಲಾಗುವುದು. ಅಣೆಕಟ್ಟು ಸೇತುವೆಯಿಂದ ನದಿಯ ಎರಡೂ ಬದಿಯ ಜನರಿಗೆ ಸಂಪರ್ಕ ಕೂಡಾ ಸುಲಭವಾಗಲಿದೆ ಎಂದು ಸಚಿವ ಪುಟ್ಟರಾಜು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

C.S.Puttaraju Dam ಪರಿಹಾರ ಅಣೆಕಟ್ಟು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ