ಬೀದಿ ನಾಯಿಗಳ ಹಾವಳಿ: ಲೋಕಾಯುಕ್ತರಿಗೆ ದೂರು

#Lokayukta #street dogs #complaint

14-09-2018

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಫಲವಾಗಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಬೀದಿ ನಾಯಿಗಳ ಹಾವಳಿಯನ್ನು ತಡೆಯಲು ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಲೋಕ್ ತಾಂತ್ರಿಕ್ ಜನತಾದಳ ಕಾರ್ಯಕರ್ತರು ಲೋಕಾಯುಕ್ತರಿಗೆ  ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿರುದ್ಧ ದೂರು ಸಲ್ಲಿಸಿದ್ದಾರೆ.

ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿ ವರ್ಷ ಬೀದಿ ನಾಯಿಗಳ ನಿಯಂತ್ರಣ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರು ನೀಡಿದ ನಂತರ ಮಾತನಾಡಿದ ಎಲ್.ಜೆ.ಡಿ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಅವರು ತಿಳಿಸಿದರು.

ಅಧಿಕಾರಿಗಳು ಬೀದಿ ನಾಯಿಗಳ ಸಂತಾನಹರಣ ಮಾಡುವುದರ ಮೂಲಕ ನಾಯಿಗಳ ಸಂಖ್ಯೆ ಕಡಿಮೆಗೊಳಿಸುತ್ತಿದ್ದೇವೆ ಎಂಬ ಸಬೂಬು ನೀಡುತ್ತಾರೆ. ಆದರೆ, ಬೀದಿ ನಾಯಿಗಳ ಸಂಖ್ಯೆ ಏರಿಕೆ ಆಗುತ್ತಿದೆ 2009ರಿಂದ ತೀರಾ ಇತ್ತೀಚಿನವರೆಗೆ ವರ್ಷಕ್ಕೆ ಸರಾಸರಿಯಾಗಿ ಒಂದು ಸಾವಿರಕ್ಕೂ ಅಧಿಕ ಹಾಗೂ ಮಕ್ಕಳ ಮೇಲೆ ನಾಯಿಗಳ ದಾಳಿ ನಡೆಸಿ ಗಾಯಗೊಳಿಸಿರುವುದು ಮಾತ್ರವಲ್ಲದೆ, ಪ್ರಾಣ ಹಾನಿಯೂ ಆಗಿದೆ ಎಂದರು.

ಪ್ರತಿ 5ವರ್ಷಕ್ಕೂಮ್ಮೆ ಪಾಲಿಕೆಯ ಪಶುಪಾಲನಾ ವಿಭಾಗ ನಾಯಿಗಳನ್ನು ಹಿಡಿದು ನಾಯಿ ಗಣತಿಗಾಗಿ ಅವುಗಳ ಕಿವಿಯ ಭಾಗದಲ್ಲಿ ಗುರುತು ಹಾಕುವುದು ವಾಡಿಕೆ. ದುರಂತ ಎಂದರೆ, 2012ರಲ್ಲಿ ಈ ರೀತಿಯ ಗಣತಿ ಮಾಡಿದಾಗ ಬೀದಿನಾಯಿಗಳ ಸಂಖ್ಯೆ 1,85,454 ಆಗಿತ್ತು. ತದನಂತರ ಯಾವುದೇ ರೀತಿಯ ಗಣತಿ ನಡೆದಿಲ್ಲ ಎಂದು ಆರೋಪಿಸಿದರು.

ಬಿಬಿಎಂಪಿಯೂ, ವಾಸ್ತವ ಅಲ್ಲದ ಅಂಕಿ-ಅಂಶ ನೀಡುತ್ತಿದೆ ಎಂದ ಅವರು, 2017-18ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ 3.5ಕೋಟಿ ರೂ ಹಣ ವೆಚ್ಚ ಮಾಡಿದೆ ಎಂದಿದೆ. ಅದೇ ರೀತಿ, ಪ್ರಸ್ತುತ ಸಾಲಿನ ಬಜೆಟ್ ನಲ್ಲಿ 5 ಕೋಟಿ ಹಣ ಖರ್ಚು ಮಾಡಿದರೂ ಯಾವುದೇ ನಿಯಂತ್ರಣ ವಾಗಿಲ್ಲ. ಹೀಗಾಗಿ, ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

street dogs Lokayukta ಬಜೆಟ್ ಅಂಕಿ-ಅಂಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ