ಉತ್ತಮ ಮಳೆ ಬರಲೆಂದು ಸುಮಾರು 20 ಲಕ್ಷ ವೆಚ್ಚದಲ್ಲಿ ಪೂಜೆ !

Kannada News

02-06-2017 218

ಬೆಂಗಳೂರು:- ಮಳೆ ಬರಲೆಂದು ಕಪ್ಪೆಗೆ ಮದುವೆ ಮಾಡುವುದು, ನಾಯಿಗೆ ಮದುವೆ ಮಾಡುವ ವಿಚಾರಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇದೀಗ ಈ ಬಾರಿ ಉತ್ತಮ ಮಳೆ ಬರಲೆಂದು ಸರ್ಕಾರವೇ  ಪೂಜೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹವಾಮಾನ ಇಲಾಖೆ ಈ ಬಾರಿಯ ಮಾನ್ಸೂನ್ ಮಳೆ ಸಾಧಾರಣವಾಗಿರುತ್ತದೆಂದು ತಿಳಿಸಿದ ಬಳಿಕ ಈ ನಿರ್ಣಯವನ್ನು ಕೈಗೊಂಡಿದೆ. ಸರ್ಕಾರವು ಕೃಷ್ಣ – ಕಾವೇರಿ ನದಿಗಳ ನೀರಾವರಿ ಮಂಡಳಿಗಳ ಬಳಿ ಹೋಗಿದ್ದು, ಪೂಜೆಗೆ ಅನುಮತಿ ನೀಡಲಾಗಿದೆ  ಎಂದು ತಿಳಿದುಬಂದಿದೆ. ಪೂಜೆಗೆ ಸುಮಾರು 20 ಲಕ್ಷ ವೆಚ್ಚಮಾಡುತ್ತಿದ್ದು ಪೂಜೆಯು ಶುಕ್ರವಾರ ಮತ್ತು ಭಾನುವಾರ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ . ಸತತವಾಗಿ ಬರದಿಂದ ತತ್ತರಿಸಿರುವ ಕರ್ನಾಟಕ ಸುಮಾರು 80 ರಷ್ಟು ತಾಲ್ಲೂಕುಗಳು ಬರದಿಂದ ನರಳುತ್ತಿವೆ, ರಾಜ್ಯದ ಜಲ ಸಂಪನ್ಮೂಲ ಸಚಿವರಾದ ಎಂಬಿ ಪಾಟಿಲ್ ಅವರು ಪೂಜೆಯ ಸಲುವಾಗಿ ಮಹಾಬಲೇಶ್ವರಕ್ಕೆ ಭೇಟಿ ನೀಡುತ್ತಿದ್ದು ಅಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ, ಪ್ರಶ್ನೆ ಯೊಂದಕ್ಕೆ ಉತ್ತರಿಸುತ್ತ  ಮಾತನಾಡಿದ ಅವರು ಕೃಷ್ಣಾ ಮತ್ತು ಕಾವೇರಿ ನದಿಗಳು ಕರ್ನಾಟಕದ ಎರಡು ಕಣ್ಣುಗಳಿದ್ದಂತೆ ಆರು ಕೋಟಿ ಜನರು ಈ ನದಿಗೆ ಭಾವನಾತ್ಮಕ ಸಂಭಂದ ಹೊಂದಿದ್ದೇವೆ ಎಂದರು. ಅಲ್ಲದೆ ಪೂಜೆ ಮಾಡುವುದರಲ್ಲಿ ತಪ್ಪೇನಿದೆ ? ಕೆಲವು ಸರ್ಕಾರಗಳು ಗಂಗಾ ಪೂಜೆ ಹಾಗೂ ಗೊದಾವರಿ ಪುಷ್ಕರಣಿಗೆ ನೂರಾರು ಕೋಟಿಗಳನ್ನು ವ್ಯಯಿಸುತ್ತಾರೆ ಅವರನ್ನೆಲ್ಲ ನೀವೇಕೆ ಪ್ರೆಶ್ನಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಹೆಸರು ಹೇಳದೆಯೇ ಟೀಕಿಸಿದರು. ಮತ್ತು ಪೂಜೆಗೆ ಇಪ್ಪತ್ತು ಲಕ್ಷ ಖರ್ಚಾಗುತ್ತಿರುವುದನ್ನು ತಳ್ಳಿಹಾಕಿದ ಅವರು ಪೂಜೆಗೆ 4-5 ಲಕ್ಷ ಮಾತ್ರ ಆಗಲಿದೆ ಎಂದರು.

 

 

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ