‘ನನ್ನ ರಕ್ತದಲ್ಲೇ ಕಾಂಗ್ರೆಸ್ ಇದೆ, ನಾನು ಕಾಂಗ್ರೆಸ್ ಬಿಡಲ್ಲ’

#E.Tukaram # Sandur #congress

14-09-2018

ಬೆಂಗಳೂರು: ಪಕ್ಷಾಂತರ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ, ಹಾಗೂ ಗೊಂದಲಗಳನ್ನು ಸೃಷ್ಟಿಸಿದೆ. ಈ ಕುರಿತಂತೆ ಹಲವು ರಾಜಕೀಯ ನಾಯಕರು ಸ್ಪಷ್ಟನೆ ನೀಡುತ್ತಿದ್ದಾರೆ ಹಾಗು ವದಂತಿಗಳಿಗೆ ತೆರೆ ಎಳೆಯುತ್ತಿದ್ದಾರೆ.

ಈ ಕುರಿಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಂಡೂರು ಶಾಸಕ ತುಕಾರಾಂ, 'ಬಿಜೆಪಿಯವರು ನಮ್ಮನ್ನು ಸಂಪರ್ಕ ಮಾಡಕ್ಕಾಗಲ್ಲ, ತಾನು ಮೊದಲಿಂದಲೂ ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ, ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ, ನಾನು ಕಾಂಗ್ರೆಸ್ ಬಿಡಲ್ಲ’ ಎಂದಿದ್ದಾರೆ.

‘ಕಾಂಗ್ರೆಸ್ ನವರು ಬಿಜೆಪಿ ಸಂಪರ್ಕ ಮಾಡಿದ್ದಾರೆ ಅನ್ನೋದೆಲ್ಲ ಸತ್ಯಕ್ಕೆ ದೂರ, ಕಾಂಗ್ರೆಸ್ ನಲ್ಲಿ ನಮಗೆ ಹೇಳೋರು ಕೇಳೋರು ಇದ್ದಾರೆ. ನಮ್ಮ ಜಿಲ್ಲೆ ಹಿಂದಿಳಿದಿದೆ ಇನ್ನೂ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ತುಂಬಾ ಇವೆ ಮೊದಲು ಆ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

E.Tukaram defection ಗಮನ ಅಭಿವೃದ್ಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ