ಸಚಿವ ಸ್ಥಾನಕ್ಕಾಗಿ ಪರಮೇಶ್ವರ್ ನಾಯಕ್ ಆಗ್ರಹ!

#P.T.Parameshwar Naik #D.K.Shivakumar # congress

14-09-2018

ಬೆಂಗಳೂರು: ಜಲ ಸಂಪನ್ಮೂಲ ಹಾಗು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದಲ್ಲಿನ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಸತತ ಎರಡು ಗಂಟೆಗಳ ಕಾಲ ನಡೆಸಿದ ಚರ್ಚೆ ಮುಕ್ತಾಯವಾಗಿದೆ. ಸಭೆ ಬಳಿಕ ಮಾತನಾಡಿದ ಬಳ್ಳಾರಿಯ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯಕ್  ‘ತಮ್ಮ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ತಾನು ಬಂದಿರುವುದಾಗಿ ಹೇಳಿದ್ದಾರೆ.

'ತಮ್ಮ ಕ್ಷೇತ್ರದಲ್ಲಿ ಆರು ಜನ ಗೆದ್ದಿದ್ದೇವೆ ತಮಗೂ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಡಿಕೆಶಿಯವರು ತಮ್ಮ ಜಿಲ್ಲೆಯ ಉಸ್ತುವಾರಿ ಆದ ಮೇಲೆ ಉತ್ತಮ ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಸಹಕಾರಿಯಾಗುವಂತಹ ಕೆಲಸ ಮಾಡಿದ್ದಾರೆ. ಹಂಪಿ ಉತ್ಸವದ ಬಗ್ಗೆ ಬಂದು ಮಾತಾನಾಡಿದ್ದಾರೆ. ನಾವೆಲ್ಲಾ ಪಕ್ಷದ ಸಿದ್ಧಾಂತದ ಆಡಿಯಲ್ಲಿ ಬದುಕುತ್ತಿದ್ದೇವೆ, ನಮ್ಮೆಲ್ಲ ಕಾಂಗ್ರೆಸ್ ಶಾಸಕರು ಜಾರಳಿಹೊಳಿಯವರಿಗೆ ಬೆಂಬಲ ನೀಡುತ್ತೆವೆ ಎಂದ ಅವರು, ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ಮುಖಂಡರು ತಿರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D.K.Shivakumar P.T.Parameshwar Naik ಸಿದ್ಧಾಂತ ಸಹಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ