ಹೇಳುವುದು ಒಂದು ಮಾಡುವುದು ಇನ್ನೊಂದು !

Saying one is another!

13-09-2018

ಕನ್ನಡ ಭಾಷೆಯ ಟಿವಿ ಚಾನಲ್ಗಳು ಬಹಳಷ್ಟು ಸಾಮಾಜಿಕ ಕಳಕಳಿ ಪ್ರದರ್ಶಿಸಲು ಪ್ರಯತ್ನಿಸುತ್ತವೆ. ತಮ್ಮ ಕಾರ್ಯಕ್ರಮಗಳಲ್ಲಿ ನಟ ನಟಿಯರ ಮೂಲಕ ಜನತೆಗೆ ಸಂದೇಶವನ್ನು ನೀಡುವ ಪ್ರಯತ್ನವನ್ನೂ ಮಾಡುತ್ತವೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದಾಗುವ ತೊಂದರೆಗಳ ಬಗ್ಗೆ ಜಾಗೃತಿ, ದಸರಾ ಸಂದರ್ಭದಲ್ಲಿ ಪ್ರಾಣಿ ಬಲಿಯ ಬಗ್ಗೆ, ಹಾಗೇ ಗಣೇಶನ ಹಬ್ಬದಲ್ಲಿ ಪರಿಸರ ಮಾಲಿನ್ಯ ಮಾಡದಂತೆ ಮತ್ತು ಕೆರೆಗಳನ್ನು ಹಾಳು ಮಾಡದಂತೆ ಮಾಹಿತಿಯನ್ನು ನೀಡುತ್ತಾರೆ. ಕೆಲವೊಮ್ಮೆ ಧಾರಾವಾಹಿಯ ಸನ್ನಿವೇಶದಲ್ಲಿ ಬಡವರು ಗಣೇಶನನ್ನು ಪೂಜೆ ಮಾಡುವಾಗ ಮಣ್ಣಿನ ಗಣೇಶನನ್ನು ಬಳಸುವುದನ್ನು ತೋರಿಸುತ್ತಾರೆ. ಆದರೆ ಇಲ್ಲೇ ಬರೋದು ಈ ದ್ವಂದ್ವದ ದರ್ಶನ. ಬಡವರು ಮಣ್ಣಿನಿಂದ ಮಾಡಿದ ಗಣೇಶನನ್ನ ಪೂಜಿಸುವುದನ್ನು ತೋರಿಸುವ ಇವರು, ಶ್ರೀಮಂತರು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನನ್ನು ಪೂಜಿಸುವುದನ್ನು ತೋರಿಸುತ್ತಾರೆ. ಅದರೊಂದಿಗೆ ಗಣೇಶ ಹಬ್ಬದ ವಿಶೇಷ ಕಾರ್ಯಕ್ರಮಗಳಲ್ಲಿ ಪಿಒಪಿ ಗಣೇಶನನ್ನೇ ತೋರಿಸಿರುತ್ತಾರೆ ಮತ್ತು ಅದನ್ನೇ ವಿಶೇಷವಾಗಿ ಎಲ್ಲಾ ಕೋನಗಳಿಂದಲೂ ತೋರಿಸುತ್ತಾರೆ. ನಿಜವಾದ ಆಚರಣೆ ಎಂದರೆ ಪಿಒಪಿ ಗಣೇಶನನ್ನು ಬಳಸಿಯೇ ಎಂಬ ರೀತಿಯಲ್ಲಿ ಬಿಂಬಿಸಿ ಜನರ ಮನಸ್ಸನ್ನು ಹಾಳು  ಮಾಡುತ್ತಾರೆ. ಇದೇ  ಈ ಚಾನಲ್ ಗಳ ಅಪ್ರಾಮಾಣಿಕತೆಗೆ ಸಾಕ್ಷಿ.

ಟಿವಿ ಮಂದಿಯ ಸಾಮಾಜಿಕ ಹೊಣೆಗಾರಿಕೆ ತೋರಿಕೆಯದಷ್ಟೆ ಎಂದು ಸಾಬೀತಾದ ಮೇಲೂ ಇನ್ನೂ ಟಿವಿ ಸಂದೇಶಗಳನ್ನು ಜನ ಹೇಗೆ ಪಾಲಿಸುತ್ತಾರೆ?ಈ ಚಾನಲ್ ಗಳು ಮಾಡುವುದೆಲ್ಲ ಬರೀ ಆಡಂಬರಕ್ಕಾಗಿ, ಜನರನ್ನು ಆಕರ್ಷಿಸುವುದಕ್ಕಾಗಿ ಮತ್ತು ಹಣ ಮಾಡುವುದಕ್ಕಾಗಿ ಎಂಬ ಸತ್ಯವನ್ನು ಅರಿತರೆ ಮಾತ್ರ ಸಾಮಾನ್ಯ ಜನರ ಏಳಿಗೆಯಾಗಲು ಸಾಧ್ಯ ಎಂಬ ಸತ್ಯ ಜನರಿಗೆ ಯಾವಾಗ ಅರಿವಾಗುತ್ತದೋ ಎಂದು ಕಾದು ನೋಡಬೇಕಷ್ಟೆ.

ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ