ಕಾರನ್ನು ಬೆನ್ನಟ್ಟಿ ಅಕ್ರಮ ಮದ್ಯ ವಶಪಡಿಕೊಂಡ ಅಬಕಾರಿ ಸಿಬ್ಬಂದಿ

#Alcohol #seized

12-09-2018

ಕಾರವಾರ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಾರನ್ನು ಬೆನ್ನಟ್ಟಿದ ಅಬಕಾರಿ ಅಧಿಕಾರಿಗಳು ಸುಮಾರು 15 ಕಿಲೋಮೀಟರ್ ಗೂ ಅಧಿಕ ದೂರ ಹಿಂಬಾಲಿಸಿ ಆರೋಪಿಯನ್ನು ಅಕ್ರಮ ಮದ್ಯ ಸಮೇತ ಬಂಧಿಸಿ, ಒಂದೂವರೆ ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಕಾರವಾರ ನಗರದತ್ತ ಸಾಗಾಟ ಮಾಡುತ್ತಿದ್ದ ಅಕ್ರಮ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಕಾರು ಮತ್ತು ಮದ್ಯದ ಮೊತ್ತ ಐದು ಲಕ್ಷ ರೂ ಎಂದು ಅಂದಾಜಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

alcohol seized ಸಾಗಾಟ ಗೋವಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ