ಪಿಓಪಿ ಗಣೇಶ ಮೂರ್ತಿಗಳು ಅಧಿಕಾರಿಗಳ ವಶ

#Ganesha # Festival #officers

12-09-2018

ಹಾಸನ: ಪಿಓಪಿ ಗಣಪತಿ ವಿಗ್ರಹಗಳ ಮಾರಾಟಕ್ಕೆ ನಿಷಿದ್ದ ಹಿನ್ನೆಲೆ, ಹಾಸನದಲ್ಲಿ ಅನೇಕ ಕಡೆ ಮಾರಾಟಕ್ಕಿಟ್ಟಿದ್ದ ಪಿಓಪಿ ಗಣಪತಿ ಮೂರ್ತಿಗಳನ್ನು ನಗರ ಸಭೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲ ದಿನಗಳ ಮೊದಲೇ ಪರಿಸರಕ್ಕೆ ಹಾನಿಯಾಗುವ ಮೂರ್ತಿಗಳನ್ನು ಮಾರದಂತೆ ನಗರಸಭೆ ಆದೇಶ ಹೊರಡಿಸಿತ್ತು. ಕೇವಲ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಇಡುವಂತೆ ಜನತೆಗೆ ಮನವಿ ಕೂಡ ಮಾಡಿತ್ತು. ಇದಾಗಿಯೂ ಹಲವಡೆ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಟ್ರ್ಯಾಕ್ಟರ್ ನಲ್ಲಿ ತುಂಬಿ ವಶಪಡಿಸಿಕೊಂಡಿದ್ದಾರೆ ನಗರ ಸಭೆ ಸಿಬ್ಬಂದಿ. ನಗರದ ಹೊಸ ಬಸ್ ನಿಲ್ದಾಣದ ಎದುರು ಗೊಡೌನ್ ನಲ್ಲಿ ಶೇಖರಿಸಿದ್ದ ಪಿಓಪಿ ಗಣಪತಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#POP #Ganesh ಆದೇಶ ಪರಿಸರ ಸ್ನೇಹಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ