ವಿದೇಶದಿಂದಲೇ ಜಾರಕಿಹೊಳಿ ಬ್ರದರ್ಸ್ ಗೆ ಸಿದ್ದು ತಾಕೀತು!

#Siddaramaiah #jarkiholi brothers #Foreign

12-09-2018 419

ಬೆಂಗಳೂರು: ವಿದೇಶಿ ಪ್ರವಾಸದಲ್ಲಿದ್ದರೂ ಬೆಳಗಾವಿ ರಾಜಕಾರಣದ ಬಗ್ಗೆ ಮಾಹಿತಿ ಪಡೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಜಾರಕಿಹೊಳಿ ಬ್ರದರ್ಸ್ ಅಸಮಧಾನ ವಿಚಾರದ ಕುರಿತು ಜಾರಕಿಹೊಳಿ ಬ್ರದರ್ಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಸುಮಾರು 20ನಿಮಿಷಗಳ ಕಾಲ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತಾನು ವಿದೇಶಿ ಪ್ರವಾಸದ ಸಂದರ್ಭದಲ್ಲಿ ಈ ರೀತಿ ಮಾಡೋದು ಸರಿಯಲ್ಲ. ನೀವು ಏನೇ ಮಾಡಿದ್ದರೂ ನನ್ನ ಹೆಸರು ಬರುತ್ತದೆ. ಎಲ್ಲರೂ ತಾಳ್ಮೆಯಿಂದ ಇರಬೇಕು, ನಾನು ಬಂದ ಮೇಲೆ ಆ ವಿಚಾರಗಳ ಬಗ್ಗೆ ಚರ್ಚಿಸೋಣ, ನೀವು ಹೀಗೆ ಮಾಡಿದರೆ ನಾನೇ ಇದಕ್ಕೆಲ್ಲಾ ಸೂತ್ರಧಾರ ಎಂಬ ಆರೋಪ ಬರುತ್ತದೆ. ನಾನು ಬೆಂಗಳೂರಿಗೆ ಬರೋವರೆಗೂ ಎಲ್ಲರೂ ಮೌನವಾಗಿರಿ ಎಂದು ವಿದೇಶದಿಂದಲೇ ಜಾರಕಿಹೊಳಿ ಬ್ರದರ್ಸ್ ಗೆ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Siddaramaiah jarkiholi brothers ಸೂತ್ರಧಾರ ತಾಕೀತು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ