ಪೊಲೀಸರ ಮೇಲೆ ಹಲ್ಲೆ ಮಾಡಿದ್ದವನ ಬಂಧನ

#Trafic Police #Assault #Arrest

12-09-2018

ಬೆಂಗಳೂರು: ಕರ್ತವ್ಯನಿರತ ಸಂಚಾರ ಪೊಲೀಸ್ ಪೇದೆ ಹಾಗೂ ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಯೊಬ್ಬನನ್ನು ಬಸವೇಶ್ವರ ನಗರ ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಉಳಿದಿಬ್ಬರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ. ವಿಜಯನಗರದ ಮೋದಿ ಬ್ರಿಡ್ಜ್ ಬಳಿ ನಿನ್ನೆ ರಾತ್ರಿ 8ರ ವೇಳೆ ವಿಜಯನಗರ ಸಂಚಾರ ಪೊಲೀಸ್ ಠಾಣೆ ಪೇದೆ ಶಶಿಕುಮಾರ್ ಹಾಗೂ ಹೋಂಗಾರ್ಡ್ ಮಹೇಶ್ ಸಂಚಾರ ಸುಗಮಗೊಳಿಸುತ್ತಿದ್ದರು ಈ ವೇಳೆ ಬೈಕ್‍ನಲ್ಲಿ ಬಂದು ಸಂಚಾರ ನಿಯಮ ಉಲ್ಲಂಘಿಸಿದ ಇಬ್ಬರನ್ನು ಪ್ರಶ್ನಿಸಿದ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ರಂಗನಾಥ್ ಸೇರಿ ಮೂವರು, ಇಬ್ಬರ ಕೆನ್ನೆಗೆ ಬಾರಿಸಿ, ಹೊಟ್ಟೆಗೆ ಗುದ್ದಿ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿದ ಬಸವೇಶ್ವರ ನಗರ ಪೊಲೀಸರು, ಆರೋಪಿ ರಂಗನಾಥ್‍ನನ್ನು ಬಂಧಿಸಿ, ಉಳಿದಿಬ್ಬರ ಬಂಧನಕ್ಕೆ ಶೋಧ ನಡೆಸಿದ್ದಾರೆ. ವಿಚಾರಣೆ ವೇಳೆ ರಂಗನಾಥ್, ಪೇದೆ ಶಶಿಕುಮಾರ್ ಹಾಗೂ ಮಹೇಶ್ ಅವರು, ಬೈಕ್‍ನಲ್ಲಿ ಬಂದ ನಮ್ಮನ್ನು ನಿಲ್ಲಿಸಿ ವಿನಾಕಾರಣ ನಿಂದಿಸಿದರು. ಇದರಿಂದ ಆಕ್ರೋಶಗೊಂಡು ಕೆನ್ನೆಗೆ ಬಾರಿಸಿದ್ದಾಗಿ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police Assault ಶೋಧ ಆಕ್ರೋಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ