ಜೇಡಿಮಣ್ಣಿನ ಚಿಕ್ಕ ಗಣೇಶ ಮೂರ್ತಿಗೆ ಹೆಚ್ಚಾದ ಬೇಡಿಕೆ

#Clay #Pop ganesha

12-09-2018

ಮಂಡ್ಯ: ಪಿಓಪಿ ಗಣೇಶ ಮತ್ತು 6 ಅಡಿ ಬೃಹತ್ ಗಣೇಶನ ಪ್ರತಿಷ್ಠಾಪನೆ ನಿಷೇಧ ಹಿನ್ನೆಲೆ, ಸಕ್ಕರೆ ನಾಡು ಮಂಡ್ಯದಲ್ಲಿ ಜೇಡಿಮಣ್ಣಿನ ಚಿಕ್ಕ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗಿದೆ. ನಿಷೇಧದಿಂದ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಭಕ್ತರು ಕೊಂಡೊಯ್ಯುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರ ಬಳಿ ಬೃಹತ್ ಗಣೇಶ ಮೂರ್ತಿಗಳು ಮಾರಾಟವಾಗದೆ ಉಳಿಯುತ್ತಿವೆ. ಚಿಕ್ಕದಾದ ಬಣ್ಣ ರಹಿತ ಪರಿಸರ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಮುಂದಾಗಿರುವ ಜಿಲ್ಲೆಯ ಭಕ್ತ ಸಮೂಹ, ರಾಸಾಯನಿಕ ಮಿಶ್ರಿತ ಬಣ್ಣದ ಗಣೇಶ ಮೂರ್ತಿಯನ್ನು ನಿರಾಕರಿಸುವ ಮೂಲಕ ಜಿಲ್ಲೆಯ ಭಕ್ತರು ಪರಿಸರ ಕಾಳಜಿ ತೋರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ganesha POP ಪ್ರತಿಷ್ಠಾಪನೆ ಸಮೂಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ