ಸಮ್ಮಿಶ್ರ ಸರ್ಕಾರ ತಾನಾಗಿಯೇ ಉರುಳಿ ಹೋಗಲಿದೆ: ಶಾಸಕ ಈಶ್ವರಪ್ಪ

#K.S.Eshwarappa  #Lok Sabha #coalition government

12-09-2018

ಶಿವಮೊಗ್ಗ: ‘ರಾಜ್ಯದಲ್ಲಿ ಸರ್ಕಾರ ಇಲ್ಲ ಎಂದು ಬಿಜೆಪಿಯವರು ಹೇಳುವ ಅವಶ್ಯಕತೆಯಿಲ್ಲ. ಅದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸಮ್ಮಿಶ್ರ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ‘ರಾಜ್ಯದ ಇತಿಹಾಸದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಇಲ್ಲ ಎಂದು ನೊಂದು ಹೇಳುತ್ತಿದ್ದೇನೆ ಎಂದರು. ಜಾರಕಿಹೊಳಿ ಬ್ರದರ್ಸ್ ಸೇರಿದಂತೆ ಹಲವರು ಸರ್ಕಾರಕ್ಕೆ ಗಡುವು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯವರು ಸರ್ಕಾರ ಉರುಳಿಸುವ ಪ್ರಯತ್ನ ಮಾಡಲ್ಲ‌.‌ ತಾನಾಗಿಯೇ ಸರ್ಕಾರ ಉರುಳಿ ಹೋಗಲಿದೆ. ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಬಿಜೆಪಿಯ 5 ಶಾಸಕರನ್ನು ನಾವು ಸೆಳೆಯುತ್ತೇವೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ತಿರುಗೇಟು ನೀಡಿದ ಈಶ್ವರಪ್ಪ.’ ನಾವು ಆಪರೇಶನ್ ಕಮಲ ಮಾಡಿದರೆ ಜೆಡಿಎಸ್-ಕಾಂಗ್ರೆಸ್ ನವರು ತಪ್ಪು ಎನ್ನುತ್ತಾರೆ. ತಪ್ಪು- ಸರಿ ಯಾವುದು ಎಂಬುದನ್ನು ರಾಜ್ಯದ ಜನರೇ ನಿರ್ಧರಿಸುತ್ತಾರೆ. ಬಿಜೆಪಿಯ 104 ಶಾಸಕರು ಹುಲಿಗಳಿದ್ದಂತೆ ಯಾರು ಮುಟ್ಟಲೂ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಲೋಕಸಭಾ ಚುನಾವಣೆಗೆ ಶಿವಮೊಗ್ಗ ಅಭ್ಯರ್ಥಿಗಳ ಪಟ್ಟಿಯಲ್ಲಿ ಈಶ್ವರಪ್ಪ ಹೆಸರು ಸೇರ್ಪಡೆಯಾಗಿದೆ ಎನ್ನಲಾದ ವಿಚಾರದ ಕುರಿತು, ಯಾರೋ ಹೇಳಿದ್ದಾರೆ ಎಂದರೆ ಅದಕ್ಕೆ ನಾನು ಅಭ್ಯರ್ಥಿಯಾಗಲು ಸಾಧ್ಯವಿಲ್ಲ. ಪಕ್ಷದ ನಾಯಕರುಗಳು, ಹಿರಿಯರು ಬಯಸಿದರೆ ಅವರು ಮಾತನ್ನು ಮೀರಲ್ಲ. ಪಕ್ಷದ ಕಾರ್ಯಕರ್ತನಾಗಿ ವರಿಷ್ಠರ ತೀರ್ಮಾನಕ್ಕೆ ತಾನು ಬದ್ಧ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S.Eshwarappa Lok Sabha ತೀರ್ಮಾನ ಅಭ್ಯರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ