ಬಿಎಸ್ವೈ ಮತ್ತೆ ಸಿಎಂ ಆಗ್ತಾರೆ: ಶಾಸಕ ರೇಣುಕಾಚಾರ್ಯ

# M.P.Renukacharya #B.S.Yeddyurappa # dollars colony

12-09-2018

ಬೆಂಗಳೂರು: ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸಕ್ಕೆ ಬಿಜೆಪಿ ಶಾಸಕರ ದಂಡೇ ಆಗಮಿಸಿದೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ, ತರೀಕೆರೆ ಶಾಸಕ ಸುರೇಶ್, ಮಾಯಕೊಂಡ ಶಾಸಕ-ಲಿಂಗಣ್ಣ, ಕಡೂರು ಶಾಸಕ-ಬೆಳ್ಳಿ ಪ್ರಕಾಶ್, ಧಾರವಾಡ ಪಶ್ಚಿಮ ವಲಯದ ಶಾಸಕ-ಅರವಿಂದ ಬೆಲ್ಲದ್ ಅವರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಬಿಎಸ್ವೈ ಭೇಟಿ ನಂತರ ಮಾತನಾಡಿದ ಶಾಸಕ ರೇಣುಕಾಚಾರ್ಯ, ‘ಈಗಾಗಲೇ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲಿ ಎಂದು ಜನರು ಆಶೀರ್ವಾದ ಮಾಡಿದ್ದರು. ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಹೇಳಿದರು.‘ಆಪರೇಶನ್ ಕಮಲದ ಬಗ್ಗೆ ಮಾತನಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ, ಆದರೆ ಬಿಜೆಪಿಗೆ ಒಳ್ಳೆಯ ದಿನಗಳು ಶೀಘ್ರ ಬರಲಿವೆ' ಎಂದರು.

'ಸಿಎಂ ಕುಮಾರಸ್ವಾಮಿ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ಯಡಿಯೂರಪ್ಪರಿಗೆ ಜನರ, ಮಠಾಧೀಶರ ಆಶೀರ್ವಾದವಿದೆ ಶೀಘ್ರ ಬಿಎಸ್ವೈ ಸಿಎಂ ಆಗುತ್ತಾರೆ ಎಂದು ನುಡಿದ ಶಾಸಕ ರೇಣುಕಾಚಾರ್ಯ, ಬಿಜೆಪಿಯ ಒಬ್ಬ ಶಾಸಕನನ್ನು ಕೂಡ ಕಾಂಗ್ರೆಸ್ನವರು ಟಚ್ ಮಾಡೋಕೆ ಆಗಲ್ಲ' ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.P.Renukacharya B.S.Yeddyurappa ಆಪರೇಶನ್ ಆಶೀರ್ವಾದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ