ಮಾಧ್ಯಮದವರ ಮೇಲೆ ಕಾರ್ಮಿಕ ಸಚಿವರ ದರ್ಪ!

#Venkataramanappa #Minister #Media

12-09-2018

ಚಿತ್ರದುರ್ಗ: ಜಿಲ್ಲಾ ಪಂಚಾಯತಿ ಸಭೆಯಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾಧ್ಯದವರನ್ನು ಅವಮಾನಿಸಿದ ಘಟನೆ ನಿನ್ನೆ ನಡೆದಿದೆ. ಸಭೆ ವೇಳೆ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಕಾರ್ಮಿಕ ಸಚಿವರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಮತ್ತು ಸಚಿವರ ನಡುವೆ ವಾಗ್ವಾದವೂ ನಡೆದಿದೆ. ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾಮೆಗಳ ಕ್ಯಾಮೆರಾ ತೆಗೆದುಕೊಂಡು ಹೊರ ಹೋಗಿ ಎಂದು ಹೇಳಿದ್ದಾರೆ.

‘ಸಭೆಗೆ ಅಡ್ಡಿಪಡಿಸಬೇಡಿ ತಗೆಯಿರಿ ನಿಮ್ ಟ್ರೈಪಾಡ್, ಹೊರಗೆ ಹೋಗಿ ಅಂತ ಗರಂ ಆಗಿದ್ದಾರೆ. ಕ್ಯಾಮೆರಾ ಟ್ರೈಪಾಡ್ ಹಿಡ್ಕೊಂಡು ಸಭೆಯಲ್ಲಿ ಬರಬೇಡಿ ಎಂದು ಮಾಧ್ಯಮದವರಿಗೆ ಅವಮಾನವಾಗುವಂತೆ ವರ್ತಿಸಿದ್ದಾರೆ ಕಾರ್ಮಿಕ ಸಚಿವ ವೆಂಕಟರಮಣಪ್ಪ.


ಸಂಬಂಧಿತ ಟ್ಯಾಗ್ಗಳು

Venkataramanappa Minister ಅವಮಾನ ಕ್ಯಾಮೆರಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ