‘ಅಂತರರಾಷ್ಟ್ರೀಯ ಪಾರ್ಸೆಲ್ ಬುಕ್ ಮಾಡಲು ಆಧಾರ್ ಕಡ್ಡಾಯವಲ್ಲ’

#Aadhaar  #international #Booking

11-09-2018 251

ಬೆಂಗಳೂರು: ಅಂತಾರಾಷ್ಟ್ರೀಯ ಪಾರ್ಸೆಲ್ ಬುಕ್ ಮಾಡಲು ಆಧಾರ್ ಕಡ್ಡಾಯವಲ್ಲ, ಆದರೆ ಗುರುತು ಚೀಟಿಗಳಲ್ಲಿ ಅದೂ ಒಂದಾಗಿರುತ್ತದೆ ಎಂದು ಅಂಚೆ ಇಲಾಖೆ ತಿಳಿಸಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ನಿಯಮಾವಳಿಗಳಂತೆ, ಬುಕಿಂಗ್ ಸಂದರ್ಭದಲ್ಲಿ ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಅಂತಾರಾಷ್ಟ್ರೀಯ ಪಾರ್ಸೆಲ್ ಅಥವಾ ಅಂತಾರಾಷ್ಟ್ರೀಯ ಇ.ಎಂ.ಎಸ್ ಬುಕಿಂಗ್‍ನಂತಹ ಮಹತ್ವದ ವಹಿವಾಟುಗಳಲ್ಲಿ ಗುರುತು ಸಾಬೀತುಪಡಿಸುವ ದಾಖಲೆ ಸಲ್ಲಿಸುವುದು ಸುರಕ್ಷತೆ ಮತ್ತು ಭದ್ರತಾ ಕಾರಣಗಳಿಂದ ಕಡ್ಡಾಯವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ. ಪಾರ್ಸೆಲ್‍ಗಳ ಮೇಲೆ ಆಧಾರ್ ಸಂಖ್ಯೆನ್ನು ನಮೂದಿಸಬೇಕೆಂದು ಭಾರತೀಯ ಅಂಚೆ ಸೂಚಿಸಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.


ಸಂಬಂಧಿತ ಟ್ಯಾಗ್ಗಳು

#parcel internationla ಬುಕಿಂಗ್ ಅಂಚೆ ಇಲಾಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ