ವಿಧಾನ ಪರಿಷತ್: 3 ಸ್ಥಾನಗಳಿಗೆ ಅಕ್ಟೋಬರ್ 3ರಂದು ಚುನಾವಣೆ

#vidhan parishad # K.S.Eshwarappa #election

11-09-2018

ಬೆಂಗಳೂರು: ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ವಿಧಾನ ಪರಿಷತ್‍ನ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್3 ರಂದು ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಜಿ.ಪರಮೇಶ್ವರ್, ಕೆ.ಎಸ್.ಈಶ್ವರಪ್ಪ ಹಾಗೂ ವಿ.ಸೋಮಣ್ಣ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಮೂರು ಸ್ಥಾನಗಳು ತೆರವಾಗಿದ್ದವು.

ಕೆ.ಎಸ್.ಈಶ್ವರಪ್ಪನವರ ಸದಸ್ಯ ಅವಧಿ 2020 ಜೂನ್ 30ರವರೆಗೆ, ಡಾ.ಜಿ.ಪರಮೇಶ್ವರ್ ಸದಸ್ಯ ಅವಧಿ 2020 ಜೂ.30 ರವರೆಗೆ ಹಾಗೂ ವಿ.ಸೋಮಣ್ಣನವರ ಅವಧಿ 2022 ಜೂನ್ 14 ರವರೆಗೆ ಇತ್ತು. ಸೆ.14 ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ