ವಿಧಾನ ಪರಿಷತ್ ಉಪಚುನಾವಣೆ: ಕೈ ಅಭ್ಯರ್ಥಿ ಸುನೀಲ್ ಗೌಡ ಗೆಲುವು

#Vidhan parishad  #sunil gowda patil #by election

11-09-2018

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಜಯಪುರ ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಗೂಳಪ್ಪ ಶೆಟಗಾರ ವಿರುದ್ಧ 1,975 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‍ಗೆ ಜೆಡಿಎಸ್ ಬೆಂಬಲ ನೀಡಿತ್ತು. ಮೇಲ್ಮನೆ ಸ್ಥಾನಕ್ಕೆ ಸೆಪ್ಪಂಬರ್ 6ರಂದು ಮತದಾನ ನಡೆದಿತ್ತು.


ಸಂಬಂಧಿತ ಟ್ಯಾಗ್ಗಳು

vidhan parishad election ಪ್ರತಿಸ್ಪರ್ಧಿ ಅಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ